

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರೋಟರಿ ಕ್ಲಬ್ ಆಫ್ ಧಾರವಾಡ ಮಿಡ್ಟೌನ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬೆಳಗಾವಿ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ನಡೆಯಿತು.
ಕ್ಲಬ್ನ 2024-25ನೇ ಸಾಲಿನ ಅಧ್ಯಕ್ಷರಾಗಿ ದೀಪಕ ಆಕಳವಾಡಿ, ಕಾರ್ಯದರ್ಶಿಯಾಗಿ ಗೋವರ್ಧನ ಭಟ್, ಖಜಾಂಚಿಯಾಗಿ ಡಾ. ಶ್ರೀಕಂಠ ರಾಮನಗೌಡರ ಸೇರಿ ಎಲ್ಲ ನಿರ್ದೇಶಕರು, ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ಜಿಲ್ಲಾ ಮಾಜಿ ಗವರ್ನರ್ ಡಾ. ಪ್ರಾಣೇಶ ಜಹಾಗೀರದಾರ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಒಂದು ಸಂಸ್ಥೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲು ಸದಸ್ಯರ ಸಹಕಾರ, ಬೆಂಬಲ ಅತ್ಯಂತ ಮುಖ್ಯವಾಗಿದೆ. ಹೀಗೆ ಸದಸ್ಯರ ಬೆಂಬಲದಿಂದಲೇ ಹಿಂದಿನ ಅಧ್ಯಕ್ಷ ಶಿವಯೋಗಿ ಅಮಿನಗಡ ತಂಡ ಒಂದು ವರ್ಷದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಯಿತು. ಅವರ ಕಾರ್ಯಗಳು ಶ್ಲಾನೀಯ ಎಂದರು.
ಶಿವಯೋಗಿ ಅಮಿನಗಡ ತಮ್ಮ ಅವಧಿಯಲ್ಲಿ ಕೈಗೊಂಡ ವಿವಿಧ ಕಾರ್ಯಗಳನ್ನು ಸಾಕ್ಷ್ಯ ಚಿತ್ರದ ಮೂಲಕ ವಿವರಿಸಿದರು. ನೂತನವಾಗಿ ಕ್ಲಬ್ ಸೇರಿದ ಅಶೋಕ ಕುದರಿಮನಿ, ಅನುಪಮಾ ಆಕಳವಾಡಿ, ಪ್ರದಿಪ ಜೈನ್, ನವೀನ ಕಡ್ಲಾಸಕರ್, ನಿತಿನ ಕಾನವಾಡೆ, ರವಿ ಶೆಟ್ಟಿ, ಕಾರ್ತಿಕ ಆಕಳವಾಡಿ, ಶಂಕರ ಬಸವರೆಡ್ಡಿ, ಮೋನಿಕಾ ಚಂದ್ರಶೇಖರ ಮರಡಿ ಅವರಿಗೆ ಸ್ವಾಗತ ಕೋರಲಾಯಿತು. ಡಾ.ವಿಲಾಸ ನಾಂದೋಡಕರ್ ಅವರಿಗೆ ಸನ್ಮಾನಿಸಲಾಯಿತು.
ಡಾ.ಗೌರಿ ತಾವರಗೇರಿ, ಡಾ.ಆನಂದ ತಾವರಗೇರಿ, ಸಂಜಯ ಇಂಗಳೆ, ವ್ಯಾಪಾರಸ್ಥರು ಇತರರು ಇದ್ದರು.