

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಪ್ರಕೃತಿಯೊಂದಿಗಿನ ಸಂವೇದನೆ ಕವಿಗಳಿಗೆ ಕವನ ರಚನೆಗೆ ಸ್ಫೂರ್ತಿಯಾಗುತ್ತದೆ. ಪರಿಸರದ ವರ್ತನೆ ಮೇಲೆ ಕವಿಯ ಕವನ ಅವಲಂಬಿತ ಎಂದು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ, ಸಾಹಿತಿ ಗಣರಾಜ ಕುಂಬ್ಳೆ ಹೇಳಿದರು.
ಕಲ್ಲಡ್ಕ ಶ್ರೀ ರಾಮ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಾಹಿತ್ಯ ಮತ್ತು ಪರಿಸರ ಕುರಿತು ಉಪನ್ಯಾಸ ನೀಡಿದರು.
ಕಲ್ಲಡ್ಕ ಪ.ಪೂ. ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ನಾಗೇಶ ಕಲ್ಲಡ್ಕ, ಪತ್ರಕರ್ತ ರೇಮಂಡ್ ತಾಕೋಡೆ, ಶ್ರೀರಾಮ ಪ್ರೌಢ ಶಾಲಾ ಮುಖ್ಯಶಿಕ್ಷಕ ಗೋಪಾಲ ಅಮ್ಟೂರು ಭಾಗವಹಿಸಿದ್ದರು.
ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಇಳಂತಿಳ ಜವಾಬ್ದಾರಿ ಘೋಷಣೆ ಮಾಡಿದರು.ಬಂಟ್ವಾಳ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಅಭಿನಂದಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಶುಭಹಾರೈಸಿದರು.
ಪದಾಧಿಕಾರಿಗಳಾದ ರಮೇಶ ಬಾಯಾರ್, ಪಂಕಜಾ ಮುಡಿಪು, ಜಯಲಕ್ಷ್ಮೀ ಶೆಣೈ ಬಂಟ್ವಾಳ, ಜಯರಾಮ ಪಡ್ರೆ, ಹೇಮಾವತಿ ಸಾಲೆತ್ತೂರು, ವಿಶ್ವನಾಥ ಮಿತ್ತೂರು, ಅಶೋಕ ಕಲ್ಯಾಟೆ, ವಿನುತಾ, ಪ್ರಶಾಂತ ಕಡ್ಯ ಉಪಸ್ಥಿತರಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪ್ರೊ.ರಾಜಮಣಿ ರಾಮಕುಂಜ, ಉಪಾಧ್ಯಕ್ಷರಾಗಿ ಈಶ್ವರ ಪ್ರಸಾದ ಕನ್ಯಾನ, ಕಾರ್ಯದರ್ಶಿಯಾಗಿ ಮಧುರ ಕಡ್ಯ ಕಲ್ಲಡ್ಕ, ಕೋಶಾಧಿಕಾರಿಯಾಗಿ ಸೀತಾ ಲಕ್ಷ್ಮೀ ವರ್ಮ ವಿಟ್ಲ, ಮಾಧ್ಯಮ ಪ್ರಮುಖರಾಗಿ ಚಿನ್ನಪ್ಪ ವೀರಕಂಬ ಅಧಿಕಾರ ಸ್ವೀಕರಿಸಿದರು.