

ಬೆಳ್ತಂಗಡಿ: ಬಳಂಜ ಬೋಂಟ್ರೊಟ್ಟುಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಧರ್ಮರಸು, ಕೊಡಮಣಿತ್ತಾಯ, ಮೈಸಂದಾಯ, ಅಂಗಣ ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ಕ್ಷೇತ್ರ ಗುಳಿಗ ದೈವಗಳಿಗೆ ಪ್ರಧಾನ ಕಲಶಾಭಿಷೇಕ, ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ನೇಮೋತ್ಸವ ಹಾಗೂ ಕೇತುಲ್ಲಾಯ ದೈವಕ್ಕೆ ಪಂಚಪರ್ವ ಸೇವೆ ನಡೆಯಿತು.
ಬೆಳಗ್ಗೆ ಭಂಡಾರ ಚಾವಡಿಯಲ್ಲಿ ಪ್ರಾರ್ಥನೆ, ಪುಣ್ಯಾಹ ಕಲಶ, ದೈವಗಳ ಭಂಡಾರ ಇಳಿಸುವುದು, ಮೂಲಸ್ಥಾನದಲ್ಲಿ ತೋರಣ ಮುಹೂರ್ತ, ನಾಗ ಸನ್ನಿಧಿಯಲ್ಲಿ ತನು-ತಂಬಿಲ ಸೇವೆ, ದೈವಸ್ಥಾನದಲ್ಲಿ ಪ್ರಧಾನ ದೈವಗಳಿಗೆ ಕಲಶಾಭಿಷೇಕ ಪರ್ವ ನಡೆದು ಸಂಜೆ ದೈವಗಳ ನೇಮೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್, ಮದ್ದಡ್ಕ ಶ್ರೀನಿವಾಸ ಅಮ್ಮಣ್ಣಾಯ, ಟ್ರಸ್ಟ್ನ ಅಧ್ಯಕ್ಷ ಹರೀಶ್ ಪೂಜಾರಿ ಬೈಲಬರಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ.ಕೋಟ್ಯಾನ್, ವ್ಯವಸ್ಥಾಪಕ ಗಣೇಶ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಎಚ್.ಎಸ್, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಯೈಕುರಿ, ಸದಸ್ಯರಾದ ಮಹಾಬಲ ಪೂಜಾರಿ, ಚಂದ್ರಶೇಖರ ಪಿ.ಕೆ, ಸತೀಶ್ ರೈ ಬಾರ್ದಡ್ಕ, ಕೃಷ್ಣಪ್ಪ ಪೂಜಾರಿ ಬೊಂಟ್ರೊಟ್ಟು, ರಮಾನಾಥ ಶೆಟ್ಟಿ ಪಂಬಾಜೆ, ಆನಂದ ದೇವಾಡಿಗ ಶಾರಬೈಲು, ಸದಾನಂದ ಪೂಜಾರಿ ಬೊಂಟ್ರೋಟ್ಟು, ಅರುಣಾ ಹೆಗ್ಡೆ ಕುಳೆಂಜಿರೋಡಿ, ಶ್ಯಾಮ್ ಬಂಗೇರ ಪೆರಾಜೆ, ಅಶೋಕ ಎಂ. ಮುಡಾಯಿಬೆಟ್ಟು, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಬಳಂಜ ಗ್ರಾ.ಪಂ. ಅಧ್ಯಕ್ಷೆ ಶೋಭಾ ಕುಲಾಲ್, ಉಪಾಧ್ಯಕ್ಷ ಯಶೋಧರ ಶೆಟ್ಟಿ, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ದೇಜಪ್ಪ ಪೂಜಾರಿ, ಗುರುಪ್ರಸಾದ್ ಹೆಗ್ಡೆ, ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ, ತಿಮ್ಮಪ್ಪ ಪೂಜಾರಿ, ಹರೀಶ್ ವೈ.ಚಂದ್ರಮ, ಸದಾನಂದ ಸಾಲಿಯಾನ್, ರವೀಂದ್ರ ಬಿ.ಅಮೀನ್, ವಿವಿಧ ಕ್ಷೇತ್ರದ ಗಣ್ಯರು, ಊರವರು ಉಪಸ್ಥಿತರಿದ್ದರು.
ಪ್ರಧಾನ ಹೋಮ ವೇಳೆ ಗರುಡ ಪ್ರದಕ್ಷಿಣೆ
ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಪ್ರಧಾನ ಹೋಮ, ದೈವಗಳಿಗೆ ಕಲಶಾಭಿಷೇಕ ಪರ್ವ ನಡೆಯುವ ಸಂದರ್ಭ ಗರುಡ ದೈವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಹೋದ ಘಟನೆ ನಡೆಯಿತು. ನೇಮೋತ್ಸವ ಸಂದರ್ಭ ಶಾಸಕ ಹರೀಶ್ ಪೂಂಜ ದೈವಗಳ ಗಂಧ-ಪ್ರಸಾದ ಸ್ವೀಕರಿಸಿ, ಕ್ಷೇತ್ರದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು.