

ಕೊಡಗು : ವಿರಾಜಪೇಟೆ ಸಮೀಪದ ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ವಧರ್ಂತಿ ಮಹೋತ್ಸವ ಮತ್ತು ಮಹಾ ಚಂಡಿಕಾ ಹವನ ಶಾಸ್ತ್ರೋಕ್ತವಾಗಿ ಭಾನುವಾರ ಜರುಗಿತು.
ಪ್ರತಿಷ್ಠಾಪನಾ ವಧರ್ಂತಿಯ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮೊದಲಿಗೆ ಗಣಪತಿ ಹೋಮ ನಡೆಯಿತು. ತದನಂತರದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಹಾ ಚಂಡಿಕಾ ಹೋಮದ ಪೂಜಾ ವಿಧಿ ವಿಧಾನಗಳು ಆರಂಭವಾದವು.
ಸ್ವರ ಶಾಸ್ತ್ರೀಯ ತಂಡದವರಿಂದ ಭಕ್ತಿ ಗೀತೆ ಗಾಯನ, ಅಯ್ಯಪ್ಪ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಕುಣಿತ ಭಜನೆ ಮತ್ತು ರುದ್ರಂ ಚಂಡೆ ಬಳಗದಿಂದ ಚಂಡೆ ಸೇವೆಯು ನಡೆಯಿತು. ಈ ಪ್ರತಿಷ್ಠಾ ವಧರ್ಂತಿ ಮಹೋತ್ಸವ ಮತ್ತು ಮಹಾ ಚಂಡಿಕಾ ಹವನವು ಪುತ್ತೂರುವಿನ ಅರ್ಚಕರಾದ ಚಂದ್ರಶೇಖರ್ ಭಟ್ ಅವರನ್ನು ಒಳಗೊಂಡ ಅರ್ಚಕರ ತಂಡದಿಂದ ನೆರವೇರಿತು.
ಅರ್ಚಕರು ಈ ಸಂದರ್ಭದಲ್ಲಿ ಪಾರಾಯಣ, ಅಲಂಕಾರ ಸೇವೆ, ಕುಂಕುಮಾರ್ಚನೆ, ಸಂಕಲ್ಪ, ಮಹಾ ಮಂಗಳಾರತಿ ಮತ್ತು ಹವನದ ಪೂರ್ಣಹುತಿಯನ್ನು ನೆರವೇರಿಸಿದರು. ಮಹಾ ಪ್ರಾರ್ಥನೆಯನ್ನು ಮಾಡಿ ನಾಡಿನ ಗ್ರಾಮದ ಸುಭೀಕ್ಷೆಗಾಗಿ ಬೇಡಲಾಯಿತು.
ತದನಂತರ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆಯು ನಡೆಯಿತು. ಈ ಸಂದರ್ಭದಲ್ಲಿ ಪುದುಪಾಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್, ವಾಮನಮೂರ್ತಿ ಭಟ್, ದೇವಸ್ಥಾನದ ಅಧ್ಯಕ್ಷರಾದ ಡಾ. ರಾಮಕೃಷ್ಣ ಬೋರ್ಕರ್, ಉಪಾಧ್ಯಕ್ಷರಾದ ನಂದ ಬೋರ್ಕರ್, ಕಾರ್ಯದರ್ಶಿ ಸುಮನ,