ಸೆ.27 ರಂದು ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ

m.giriyappa
m.giriyappa
Published on

ರಾಯಚೂರು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದವರಿಗೆ ಅಭಿನಂದನಾ ಸಮಾರಂಭವನ್ನು ಸೆ.27 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದೆಂದು ಸಂಘದ ಅಧ್ಯಕ್ಷ ಎಂ.ಗಿರಿಯಪ್ಪ ದಿನ್ನಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಪೀಠದ ಡಾ.ಪ್ರಸನ್ನಾಂದಪುರಿ ಸ್ವಾಮೀಜಿ, ಗೊಲಪಲ್ಲಿ ವಾಲ್ಮೀಕಿ ಆಶ್ರಮದ ಶ್ರೀ ವರದಾನೇಶ್ವರ ಸ್ವಾಮೀಜಿ, ಮದರಕಲ್ ರಾಜರಾಜೇಶ್ವರಿ ಆಶ್ರಮದ ನಾಮದೇವ ಗೌಡರು, ಗಾರಲದಿನ್ನಿ ಶಿವಾನಂದ ಮಠದ ಶ್ರೀ ಮೌನೇಶ್ವರ ಮಹಾರಾಜರು ವಹಿಸಿಕೊಳ್ಳಲಿದ್ದಾರೆ.

ಸಂಸದ ಜಿ.ಕುಮಾರ ನಾಯಕ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರಾಮೀಣ ಶಾಸಕ ದದ್ಬಲ ಬಸನಗೌಡ ವಹಿಸಿಕೊಳ್ಳಲಿದ್ದಾರೆ. ಉಪನ್ಯಾಸವನ್ನು ಬೀದರನ ಹುಲಸೂರುನ ಸಹಾಯಕ ಪ್ರಾಧ್ಯಾಪಕ ಡಾ.ಮಾರುತಿಕುಮಾರ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ವಿ ಶಾಸಕ ಹಂಪಯ್ಯನಾಯಕ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಜಿ.ಕರಿಯಮ್ಮ ನಾಯಕ, ಮಾಜಿ ಸಂಸದ ರಾಜಾ ಅಮರೇಶ್ವರನಾಯಕ, ಬಿ.ವಿ.ನಾಯಕ ಸೇರಿ ಅನೇಕರು ಆಗಮಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶಿವರಾಜ ನಾಯಕ ಮೇಟಿಗೌಡ, ಮಲ್ಲಿಕಾರ್ಜುನ ನಾಯಕ, ಮಹೇಂದ್ರ ನಾಯಕ, ಹನುಮಂತಪ್ಪಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net