ರಂಗಭೂಮಿಗೆ ಕಾರಂತರ ಕೊಡುಗೆ ಅಪಾರ

gajamukha
ಬಿ.ವಿ.ಕಾರಂತರ ಜನ್ಮ ದಿನಾಚರಣೆ ಪ್ರಯುಕ್ತ ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಗಜಮುಖದವಗೆ ಗಣಪಗೆ ಯಕ್ಷಗಾನ ಹಾಡುಗಾರಿಕೆ ಕಾರ್ಯಕ್ರಮವನ್ನು ನಿತ್ಯಾನಂದ ಪೈ ಉದ್ಘಾಟಿಸಿದರು
Published on

ಕಾರ್ಕಳ: ಭಾರತೀಯ ರಂಗಭೂಮಿ ಹರಿಕಾರರಲ್ಲಿ ಒಬ್ಬರಾದ ದೇಶ ಕಂಡ ಅಪ್ರತಿಮ ರಂಗಕರ್ಮಿ ಬಿ.ವಿ.ಕಾರಂತರು. ಅವರು ರಂಗಭೂಮಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ ಎಂದು ಕಾರ್ಕಳ ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ ಹೇಳಿದರು.

ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಬಿ.ವಿ.ಕಾರಂತರ ಜನ್ಮ ದಿನಾಚರಣೆ ಪ್ರಯುಕ್ತ ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ‘ಗಜಮುಖದವಗೆ ಗಣಪಗೆ’ ಯಕ್ಷಗಾನ ಹಾಡುಗಾರಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಕ್ಷ ರಂಗಾಯಣ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್, ಕಾವ್ಯಶ್ರೀ ಅಜೇರು ಉಪಸ್ಥಿತರಿದ್ದರು.

ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ನಂತರ ಕಾವ್ಯಶ್ರೀ ಅಜೇರು ಅವರಿಂದ ಯಕ್ಷಗಾನ ಹಾಡುಗಾರಿಕೆ ಪ್ರಸ್ತುತಪಡಿಸಲಾಯಿತು. ಚೆಂಡೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯಿನಕೆರೆ, ನಿರೂಪಣೆಯಲ್ಲಿ ಹರೀಶ್ ಬಳಂತಿಮೊಗರು ಸಹಕರಿಸಿದರು.

ಆಧುನಿಕ ರಂಗಭೂಮಿಗೆ ತನ್ನದೇ ಆದ ನೆಲೆ ಕಂಡುಕೊಳ್ಳಲು ತಮ್ಮ ಅಸಮಾನ್ಯ ಸಂಗೀತ ಪ್ರತಿಭೆಯಿಂದ ರಂಗ ಸಂಗೀತಕ್ಕೆ ನಾಂದಿ ಹಾಡಿದವರು ಬಿ.ವಿ.ಕಾತರಂತರು. ನಟ ನಟಿಯರ ತರಬೇತಿ, ರಂಗಸಜ್ಜಿಕೆ ಹೊಸ ನಾಟಕಗಳ ರಂಗ ಪ್ರಯೋಗ, ವಸ್ತ್ರವಿನ್ಯಾಸ ಆಧುನಿಕ ರಂಗ ಸ್ಥಳಗಳ ನಿರ್ಮಾಣ ಹೀಗೆ ಹಲವಾರು ನಿಟ್ಟುಗಳಲ್ಲಿ ರಂಗಾಯಣವನ್ನು ಕಟ್ಟಿ ಬೆಳೆಸಿದ ಕೀರ್ತಿ ಕಾರಂತರದ್ದು.-ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶಕ, ಯಕ್ಷ ರಂಗಾಯಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net