ಮಕ್ಕಳ ಬೌದ್ಧಿಕ ವಿಕಸನಕ್ಕೆ ಆದ್ಯತೆ

nursary
Published on

ಹೆಬ್ರಿ: ನರ್ಸರಿ ತರಗತಿಯಲ್ಲಿ ವಿಶೇಷವಾಗಿ ಚಟುವಟಿಕೆ ಆಧಾರಿತ ಪ್ರಾಯೋಗಿಕ ತರಗತಿಗಳ ಮೂಲಕ ಮಕ್ಕಳ ಬೌದ್ಧಿಕ ವಿಕಸನಕ್ಕೆ ಆದ್ಯತೆ ನೀಡಲಾಗುವುದು ಎಂದು ಎಸ್‌ಆರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಪ್ನಾ ಎನ್.ಶೆಟ್ಟಿ ಹೇಳಿದರು.

ಹೆಬ್ರಿ ಎಸ್‌ಆರ್ ಪಬ್ಲಿಕ್ ಸ್ಕೂಲ್‌ನ (ಸಿಬಿಎಸ್‌ಇ) ಪ್ಲೇ ಸ್ಕೂಲ್ ನರ್ಸರಿ ತರಗತಿ ಉದ್ಘಾಟಿಸಿ ಮಾತನಾಡಿದರು. ಎಸ್‌ಆರ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಭಗವತಿ, ಉಪಪ್ರಾಂಶುಪಾಲ ದೀಪಕ್, ಎನ್‌ಎಸ್‌ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲ ಆಚಾರ್ಯ, ಪ್ರಾಥಮಿಕ ಶಾಲೆ ಕೋ-ಆರ್ಡಿನೇಟರ್ ಸುಜಾತಾ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net