ಭಾರತೀಯರು ಶ್ರೇಷ್ಠ ಋಷಿ ಪರಂಪರೆಯ ವಾರಸುದಾರರು

udp-24-sammelana 1
Published on

ಉಡುಪಿ: ಗುರುಕುಲದಲ್ಲಿ ವೇದ, ಸಂಸತ ಕಲಿತವರೂ ವಿಶ್ವಮಟ್ಟದಲ್ಲಿ ಸಾಧನೆ ಮಾಡಬೇಕು. ವಿವಿಧ ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣ ಮಾಡಬೇಕು. ಭಾರತೀಯರು ಶ್ರೇಷ್ಠ ಋಷಿ ಪರಂಪರೆಯ ವಾರಸುದಾರರು ಎಂದು ಹರಿದ್ವಾರದ ಪತಂಜಲಿ ಯೋಗಪೀಠದ ಮುಖ್ಯಸ್ಥ , ಯೋಗಗುರು ಬಾಬಾ ರಾಮದೇವ್​ ಹೇಳಿದರು.

ಬೆಂಗಳೂರಿನ ಭಾರತೀಯ ವಿದ್ಯತ್​ ಪರಿಷತ್ತು, ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿರುವ 3 ದಿನಗಳ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಂಸತ ಬಲ್ಲವರು ಪ್ರಾಧ್ಯಾಪಕರಾಗುವುದು ಮಾತ್ರವಲ್ಲ. ಇದಕ್ಕೂ ಮಿಗಿಲಾಗಿ ಸಾಧನೆ ಮಾಡಬಹುದು. 21ನೇ ಶತಮಾನ ಭಾರತದ್ದಾಗಿದ್ದು, ಸಂಸತ ಬಲ್ಲವರಿಗೆ ವಿಶೇಷ ಗೌರವ ಲಭಿಸಲಿದೆ. ಪ್ರಾಚಿನ ಸಂಸತಿಯ ಬಗ್ಗೆ ಸ್ವಾಭಿಮಾನ ಮತ್ತು ಗೌರವ ಹೊಂದಿರಬೇಕು. ಇದಕ್ಕೆ ಪೂರಕ ಕೆಲಸವನ್ನು ಪತಂಜಲಿ ಸಂಸ್ಥೆ ಮಾಡುತ್ತಿದೆ ಎಂದರು.

ಉಡುಪಿಗೂ ಸಮಾನ ಗೌರವ

ಮನುಷ್ಯರು ಭಗವಂತನ ಮಕ್ಕಳು ಎಂಬ ಉತ್ತಮ ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಸಿದ್ಧಾಂತವನ್ನು ಮಧ್ವಾಚಾರ್ಯರು ಪ್ರತಿಪಾದಿಸಿದ್ದಾರೆ. ಹೀಗಾಗಿ ದ್ವೆತ ದರ್ಶನದ ಮೂಲ ಉಡುಪಿ ಕ್ಷೇತ್ರಕ್ಕೆ ಕಾಶೀ, ಮಥುರಾ, ವೃಂದಾವನ ರೀತಿಯಲ್ಲಿ ಸಮಾನಾಂತರ ಗೌರವ ಸಿಗಬೇಕು ಎಂದರು.

ಹರಿದ್ವಾರದಲ್ಲಿ ಸಮ್ಮೇಳನ

ಮುಂದಿನ ಬಾರಿ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನ ಹರಿದ್ವಾರದಲ್ಲಿ ನಡೆಸಲಾಗುವುದು. ವಿಶ್ವಾದ್ಯಂತ ಗಣ್ಯರನ್ನು ಆಹ್ವಾನಿಸಿ ವಿಶ್ವ ಸಮ್ಮೇಳನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಉಡುಪಿ ಅಷ್ಟ ಮಠಾಧೀಶರು ಮತ್ತು ವಿದ್ವಾಂಸರು ಪಾಲ್ಗೊಳ್ಳಬೇಕು ಎಂದು ಆಮಂತ್ರಿಸಿದರು.

ಭಾರತೀಯ ಜ್ಞಾನ ಪರಂಪರೆಗೆ ಸರಿಸಮಾನವಿಲ್ಲ

ಪ್ರಾಚ್ಯ ವಿದ್ಯಾ ಪದ್ಧತಿ ಕಾಲದ ಪರೀೆಯಲ್ಲಿ ಪರಿಪಕ್ವವಾಗಿದ್ದು, ಇದರ ಸಂರಕ್ಷಣೆ ಅವಶ್ಯವಾಗಿದೆ. ಸನಾತನ ಧರ್ಮಕ್ಕೆ ಹಾನಿಯುಂಟು ಮಾಡುವ ಮಾತುಗಳು ಕೇಳಿಬರುವ ಕಾಲಟ್ಟದಲ್ಲಿ ಧರ್ಮ ಮತ್ತು ಸಂಸತಿಯನ್ನು ಸಂರಸಲು ಎಲ್ಲರೂ ಪಣತೊಡಬೇಕು. ಭಾರತೀಯ ಜ್ಞಾನ ಪರಂಪರೆಗೆ ಸರಿಸಮಾನವಾದುದಿಲ್ಲ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಪಾದರು ಪ್ರತಿಪಾದಿಸಿದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಎಐಒಸಿ ಅಧ್ಯೆ ಪ್ರೊ. ಸರೋಜಾ ಭಾಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಮಂಗಳೂರು ಶ್ರೀನಿವಾಸ ವಿವಿ ಕುಲಾಧಿಪತಿ ಡಾ. ರಾವೇಂದ್ರ ರಾವ್​, ಕರ್ನಾಟಕ ಸಂಸತ ವಿವಿ ಉಪಕುಲಪತಿ ಡಾ. ಅಹಲ್ಯಾ ದೇವಿ, ಮಹೋಪಾಧ್ಯಾಯ ಪ್ರೊ. ಕೊರಾಡ ಸುಬ್ರಹ್ಮಣ್ಯಂ, ಕರ್ನಾಟಕ ಸಂಸತ ವಿವಿ ಡೀನ್​ ಪ್ರೊ. ಶಿವಾನಿ, ಮಾಹೆ ವಿವಿ ಸಹಕುಲಪತಿ ಪ್ರೊ. ನಾರಾಯಣ ಸಭಾಹಿತ್​, ಪುತ್ತಿಗೆ ಮಠದ ದಿವಾನ್​ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಸೆಂಟ್ರಲ್​ ಸಂಸತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಭಾರತೀಯ ವಿದ್ವತ್​ ಪರಿಷತ್ತಿನ ಅಧ್ಯಕ್ಷ ಡಾ. ವೀರನಾರಾಯಣ ಪಾಂಡುರಂಗಿ ಸ್ವಾಗತಿಸಿದರು. ಎಐಒಸಿ ಕಾರ್ಯದರ್ಶಿ ಪ್ರೊ.ಕವಿತಾ ಹೋಲೆ ವಂದಿಸಿದರು.

ಸಂಸತದಿಂದ ಮಾತ್ರ ಸಂಸತಿ ಉಳಿಯಲು ಸಾಧ್ಯ. ಆದರೆ ಈ ಪರಂಪರೆಯನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಆರ್ಯ ಮತ್ತು ದ್ರಾವಿಡ ಪರಿಕಲ್ಪನೆಯನ್ನು ಬಿತ್ತಿ ಜನರ ಮಧ್ಯೆ ಒಡಕು ಮೂಡಿಸಲಾಗುತ್ತಿದೆ. ಸಿಲ್ಕ್​ ರೂಟ್​ ನಿರ್ಮಾಣ ಮಾಡಿದವರು ಭಾರತೀಯರು. ಆದರೆ ಬ್ರೀಟಿಷರು ಇತಿಹಾಸವನ್ನೇ ಬದಲಾಯಿಸಿ ವಿದೇಶಿಯರು ಭಾರತಕ್ಕೆ ಬರಲು ನಿರ್ಮಿಸಿದ ಮಾರ್ಗವೆಂದಿದ್ದಾರೆ. ಪ್ರಾಚ್ಯವಸ್ತು ಸರ್ವೆಕ್ಷಣಾ ಇಲಾಖೆಯಲ್ಲಿ 6 ಸಾವಿರ ಐತಿಹಾಸ ಸ್ಥಳಗಳ ಬಗ್ಗೆ ದಾಖಲೆ ಇದೆ. ಆದರೆ ಪತಂಜಲಿ ಸಂಸ್ಥೆ 10 ಸಾವಿರ ಐತಿಹಾಸಿಕ ಸ್ಥಳಗಳ ಡೇಟಾ ಸಂಗ್ರಹ ಮಾಡಿದೆ. ಆಚಾರ್ಯ ಬಾಲಕೃಷ್ಣ, ಪತಂಜಲಿ ಯೋಗಪೀಠ, ಹರಿದ್ವಾರ ಸ್ವಾತಂತ್ರ$್ಯ ಪೂರ್ವದಿಂದಲೂ ಭಾರತೀಯ ಬೌದ್ಧಿಕ ಪರಂಪರೆಯ ಬೆಳವಣಿಗೆಯಲ್ಲಿ ದೇಶದ 18ಕ್ಕೂ ಅಧಿಕ ಪ್ರಾಚ್ಯವಿದ್ಯಾ ಸಂಸ್ಥೆಗಳು ಹಾಗೂ ವಿದ್ವಾಂಸರ ಯೋಗದಾನ ಮಹತ್ವದ್ದಾಗಿದೆ. ದೇಶದಲ್ಲಿ ಇಂದು ಇಂಗ್ಲಿಷ್​ ಕೇಂದ್ರಿತ ವ್ಯವಸ್ಥೆ ಬೆಳೆದಿದ್ದು, ಭಾರತೀಯ ಭಾಷಾ ಕೇಂದ್ರಿತ ಶಿಕ್ಷಣ ಪದ್ಧತಿ ಬೆಳೆಯಬೇಕು. ಇದಕ್ಕಾಗಿ ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಜ್ಞಾನ ಪದ್ಧತಿಗೆ ಆದ್ಯತೆ ನೀಡಲಾಗಿದೆ. ಪದ್ಮಶ್ರೀ ಚಮು ಕೃಷ್ಣ ಶಾಸ್ತ್ರಿ, ಅಧ್ಯಕ್ಷರು, ಭಾರತೀಯ ಭಾಷಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net