ಗೋ ರಕ್ಷಣೆ ಪ್ರತಿಯೊಬ್ಬನ ಕರ್ತವ್ಯ

gantidhama
ತಗ್ಗರ್ಸೆ ಗ್ರಾಮದ ಮೈಕಳದಲ್ಲಿ ಶನಿವಾರ ಗಂಟಿಧಾಮ ಉದ್ಘಾಟಿಸಿ ಹೃದಯವಿದ್ಯಾ ಫೌಂಡೇಷನ್ ಅಧ್ಯಕ್ಷ ಗುರು ವಿದ್ಯಾಸಾಗರ್ ಮಾತನಾಡಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಗೋವುಗಳು ಸಂತೋಷವಾಗಿದ್ದರೆ ಸರ್ವ ದೇವತೆಗಳು ಸಂತುಷ್ಟರಾಗಿರುತ್ತಾರೆ. ಆ ಮೂಲಕ ಇಡಿ ಜಗತ್ತೇ ಸಂಭ್ರಮದಲ್ಲಿರುತ್ತದೆ. ದುರ್ಬಲ ಗೋವುಗಳ ಸಹಿತ ಎಲ್ಲ ಗೋವುಗಳ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದು ಹೃದಯವಿದ್ಯಾ ಫೌಂಡೇಷನ್ ಅಧ್ಯಕ್ಷ ಗುರು ವಿದ್ಯಾಸಾಗರ್ ಹೇಳಿದರು.]

ಶನಿವಾರ ಬೈಂದೂರು ತಗ್ಗರ್ಸೆ ಗ್ರಾಮದ ಮೈಕಳದಲ್ಲಿ ಅಶಕ್ತ ಗೋವುಗಳ ಪಾಲನಾ ಕೇಂದ್ರ ಗಂಟಿಧಾಮ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳಿಗೆ ನಮ್ಮ ದೇಶದ ಗ್ರಾಮಗಳು ಆಧಾರವಾಗಿದ್ದು, ಗ್ರಾಮಕ್ಕೆ ಕೃಷಿ ಆಧಾರವಾಗಿದೆ. ಕೃಷಿಗೆ ರೈತರು ಆಧಾರವಾಗಿದ್ದು, ರೈತರಿಗೆ ಗೋವುಗಳೇ ಆಧಾರವಾಗಿದೆ. ಗೋವು ಪೂಜನೀಯ ಮಾತ್ರವಲ್ಲದೇ ನಮ್ಮ ನಿತ್ಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ತಿಮ್ಮಣ್ಣ ಹೆಗಡೆ ಹಾಲಂಬೇರು, ಸಮೃದ್ಧ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಪಶು ವೈದ್ಯ ಡಾ.ನಾಗರಾಜ್ ಇದ್ದರು.  ಭಾಗೀರಥಿ ಸುರೇಶ್ ಪ್ರಾರ್ಥಿಸಿದರು. ಗೋಪಾಲ ಪೂಜಾರಿ ವಸ್ರೆ ಸ್ವಾಗತಿಸಿದರು. ಗಜಾನನ ಮೈಕಳ ಹಾಗೂ ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net