

ಶ್ರೀ ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ 81 ನೇ ಜನುಮ ದಿನವನ್ನು ಶುಕ್ರವಾರ ಶ್ರೀಗಳ ಭಕ್ತ ವೃಂದದಿಂದ ಅರ್ಥಪೂರ್ಣ ಆಚರಣೆ ಮಾಡಲಾಯಿತು.
ಚಾಮುಂಡಿ ಬೆಟ್ಟದ ತಪಲಿನಲ್ಲಿರುವ ಭಾರತಿ ಯೋಗಧಾಮದಲ್ಲಿ ಶ್ರೀಗಳ ಭಕ್ತ ವೃಂದ ಗೋಪೂಜೆ ಮಾಡಿ ಬೆಲ್ಲ, ಹುಲ್ಲು, ಮೇವು ನೀಡುವ ಮೂಲಕ ಶ್ರೀಗಳ ಜನ್ಮದಿನ ಆಚರಿಸಿದರು.
ಮುಖಂಡ ಕೇಬಲ್ ಮಹೇಶ್ ಮಾತನಾಡಿ, ಗಣಪತಿ ಸಚ್ಚಿದಾನಂದ ಆಶ್ರಮ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರವಾಗಿದೆ. ಜತೆಗೆ ಪರಿಸರ ಪೋಷಣೆ ಮಾಡುವ ಜತೆಗೆ ಸಾರ್ವಜನಿಕರಿಗೆ ಮನಃಶಾಂತಿ ನೀಡುವ ತಾಣವಾಗಿದೆ. ದೇಶ ವಿದೇಶಗಳ ಭಕ್ತವೃಂದವನ್ನು ಆಕರ್ಷಿಸುತ್ತಿದೆ ಎಂದರು.
ಯಾವುದೇ ಜಾತಿಭೇದವಿಲ್ಲದೆ ಜನಮುಖಿ ಕೇಂದ್ರವಾಗಿದೆ. ಕೋವಿಡ್ ಸಂಧರ್ಭದಲ್ಲಿ ಲಕ್ಷಾಂತರ ಮಂದಿಗೆ ಪ್ರತಿನಿತ್ಯ ಅನ್ನದಾನ ಮತ್ತು ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದೆ. ಈ ಬಾರಿ ನಾಡಹಬ್ಬ ದಸರಾವನ್ನ ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಉದ್ಘಟಿಸುವಂತೆ ಸರ್ಕಾರ ಪರಿಗಣಿಸಬೇಕು. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ ಎಂದರು.
ಭಕ್ತಾದಿಗಳಾದ ಅಪೂರ್ವ ಸುರೇಶ್, ವಿಕ್ರಮ ಅಯ್ಯಂಗಾರ್, ದುರ್ಗಾ ಪ್ರಸಾದ್, ಆನಂದ್, ಚೇತನ್, ಮಹದೇವ್ ಸ್ವಾಮಿ, ಸಂತೋಷ್ ಇತರರಿದ್ದರು.