ಶುದ್ಧ ನೀರು ಸೇವಿಸಿರೆ ಆರೋಗ್ಯ

Inaugurate drinking water plant
Inaugurate drinking water plant in channaryapattana
Published on

ವಿಜಯವಾಣಿ ಸುದ್ದಿ ಜಾಲ ಚನ್ನರಾಯಪಟ್ಟಣ
ಗ್ರಾಮೀಣ ಭಾಗದ ಜನರ ಆರೋಗ್ಯ ಕಾಳಜಿಯಿಂದ ಬಮುಲ್‌ನಿಮದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುತ್ತಿದ್ದು, ಈ ಘಟಕದಲ್ಲಿ 5 ರೂ. ಗೆ 20 ಲೀಟರ್ ನೀರು ಲಭ್ಯವಿದ್ದು, ಶುದ್ಧ ನೀರು ಸೇವಿಸಿ ಆರೋಗ್ಯವಂತಾಗಿರಬೇಕು ಎಂದು ಬಮುಲ್ ಉಪಾಧ್ಯಕ್ಷ ಕೆ.ಎಂ.ಮಂಜುನಾಥ್ ಹೇಳಿದರು.
ಹೋಬಳಿಯ ಭಟ್ಟರಮಾರೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬಮುಲ್‌ನಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಬಮುಲ್‌ನಿಂದ ಹಾಲು ಉತ್ಪಾದಕರ ಸಂಘಗಳಿಗೆ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಅನುದಾನ ಹಾಗೂ ಸಹಕಾರಿ ಸಂಘಗಳಿಗೆ ಪೈಂಟಿಂಗ್ ಹಾಗೂ ಸಹಕಾರಿ ಸಂಘಗಳ ಹೊಸ ಕಟ್ಟಡ ನಿರ್ಮಾಣಕ್ಕೆ ನೆರವು ಹಾಗೂ ಹಸು ಶೆಡ್ ನಿರ್ಮಾಣಕ್ಕೆ ಧನಸಹಾಯ ಸೌಲಭ್ಯ ನೀಡಲಾಗಿದೆ ಎಂದರು.
ಡೇರಿ ಸಂಘದ ಅಧ್ಯಕ್ಷ ಕೆ.ಎಂ.ಗೌಡ ಮಾತನಾಡಿ, ಭಟ್ಟರ ಮಾರನಹಳ್ಳಿ ದೊಡ್ಡ ಗ್ರಾಮವಾಗಿದ್ದು, ಶುದ್ಧ್ಧ ಕುಡಿಯುವ ನೀರಿನ ಘಟಕ ಆಗಿರುವುದರಿಂದ ಎಲ್ಲರಿಗೂ ಅನುಕೂಲವಾಗಿದೆ. ಸಹಕಾರಿ ಸಂಘದ ಮುಖಾಂತರ ನಿರ್ವಹಣೆ ಮಾಡುವುದರಿಂದ ಸಂಘಕ್ಕೂ ಲಾಭ ಬರುತ್ತದೆ ಎಂದರು.
ಬೆಂಗಳೂರು ಪೂರ್ವ ಮತ ಕ್ಷೇತ್ರದ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಎಂ ಶ್ರೀನಿವಾಸ್, ಪ್ರಭಾರ ಸಹಾಯಕ ವ್ಯವಸ್ಥಾಪಕ ಕೆ.ಎಸ್.ಹನುಮಂತಪ್ಪ, ಸಂಘದ ಉಪಾಧ್ಯಕ್ಷ ನಾಗೇಶ್, ನಿರ್ದೇಶಕರಾದ ಕಾಳಪ್ಪ, ಎಂ.ನಾರಾಯಣಸ್ವಾಮಿ, ಬಿ.ಎನ್.ನಾಗೇಶ್, ಮಂಜಾಚಾರಿ, ಈರೇಗೌಡ, ಉಮೇಶ್, ಬಸಮ್ಮ, ನಾರಾಯಣಮ್ಮ, ಮುಖ್ಯ ಕಾರ್ಯನಿರ್ವಾಹಕರಾದ ಭರತ್, ಹಾಲು ಪರೀಕ್ಷಕ ದೇವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net