ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅಗತ್ಯ

Inaugurate Anganwadi Centre
Inaugurate hosakote Anganwadi Centre
Published on

ಶಾಸಕ ಶರತ್‌ಬಚ್ಚೇಗೌಡ ಅಭಿಮತ

ಅಂಗನವಾಡಿ ಕೇಂದ್ರ ಉದ್ಘಾಟನೆ


ವಿಜಯವಾಣಿ ಸುದ್ದಿಜಾಲ ನಂದಗುಡಿ
ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.
ಹೋಬಳಿಯ ತಾವರೆಕೆರೆ ಗ್ರಾಪಂ ವ್ಯಾಪ್ತಿಯ ಯಳಚಹಳ್ಳಿ, ಸಿಬಿ ಕಾಲನಿಯಲ್ಲಿ ವೋಲ್ವೋ ಸಂಸ್ಥೆ ಸಹಯೋಗದಲ್ಲಿ ನವೀಕರಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ವೋಲ್ವೋ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ 2 ದಶಕದಿಂದ ತಾವರೆಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಶೈಕ್ಷಣಿಕ, ಆರೋಗ್ಯ ಪ್ರಗತಿಗೆ ತನ್ನದೇ ಕೊಡುಗೆ ನೀಡುತ್ತಿದೆ ಎಂದರು. ಕರೊನಾ ಸಂದರ್ಭದಲ್ಲಿ ಬಸ್‌ಗಳ ವ್ಯವಸ್ಥೆ ಮಾಡಿ ಹಳ್ಳಿ ಹಳ್ಳಿಗೆ ಹೋಗಿ ಕರೊನಾ ನಿಯಂತ್ರಣಕ್ಕೆ ಲಸಿಕೆ ಜತೆಗೆ ದಿನಸಿ ಕಿಟ್ ನೀಡುವಲ್ಲಿ ಸಂಸ್ಥೆ ಸಹಕರಿಸಿದೆ ಎಂದು ಹೇಳಿದರು.
ಅಂಗವಾಡಿಗಳ ನವೀಕರಣಕ್ಕೆ ಒತ್ತು: 10 ಲಕ್ಷ ರೂ.ವೆಚ್ಚದಲ್ಲಿ 3 ಅಂಗನವಾಡಿ ಹಾಗೂ ಬೈಲನರಾಸಪುರ ವ್ಯಾಪ್ತಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ 2 ಅಂಗನವಾಡಿ ಕೇಂದ್ರಗಳನ್ನು ನವೀಕರಣ ಮಾಡಿ, ಉದ್ಘಾಟನೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು. ಖಾಸಗಿ ಶಾಲೆಗಳಂತೆ ಆಟೋಟದ ಸಲಕರಣೆಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ತಾವರೆಕೆರೆ ಗ್ರಾಮದ ಶಾಲೆಗಳನ್ನು ಮಾದರಿ ಮಾಡಲು ಸಿಎಸ್‌ಆರ್ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು ಎಂದರು. ಅನುಗೊಂಡನಹಳ್ಳಿ ಹೋಬಳಿ ದೇವನಗೊಂಡಿ ಹಾಗೂ ನಂದಗುಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಆಯ್ಕೆ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net