ಔದ್ಯೋಗಿಕ ಬದುಕಿನಲ್ಲಿ ಸಮಾಜಮುಖಿ ನಿರ್ಧಾರ : ಡಾ.ಅರುಣ್ ಪ್ರಕಾಶ್ ಕರೆ

nss
Published on

ಉಪ್ಪಿನಂಗಡಿ: ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಯುವಜನತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಔದ್ಯೋಗಿಕ ಬದುಕಿನಲ್ಲಿ ಸಮಾಜಮುಖಿ ನಿರ್ಧಾರಗಳನ್ನು ತೆಗೆದುಕೊಂಡು ಪರಿಸರಪರ ಜೀವನ ಸಾಗಿಸಬೇಕು ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿ ಡಾ.ಅರುಣ್ ಪ್ರಕಾಶ್ ಹೇಳಿದರು.

ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.

ಪ್ರಾಂಶುಪಾಲ ಡಾ.ಶೇಖರ ಎಂ.ಬಿ, ವಿದ್ಯಾರ್ಥಿಗಳು ತಾವು ವಾಸಿಸುವ ಪರಿಸರ ಶುಚಿಯಾಗಿಟ್ಟುಕೊಂಡು ಆರೋಗ್ಯಪೂರ್ಣ ವಾತಾವರಣ ನಿರ್ಮಿಸಬೇಕು ಎಂದರು.

ಎನ್.ಎಸ್.ಎಸ್ ಯೋಜನಾಧಿಕಾರಿ ಡಾ.ಹರಿಪ್ರಸಾದ್ ಎಸ್. ಪ್ರಸ್ತಾಪಿಸಿದರು. ಎನ್.ಎಸ್.ಎಸ್ ಘಟಕ ನಾಯಕರಾದ ಲಾವಣ್ಯ, ಮನೀಶ್ ಯು, ದೀಕ್ಷಾ ಎನ್.ಎಸ್, ಪ್ರಸನ್ನ ಅವರಿಗೆ ಹಾಗೂ ಎನ್.ಎಸ್.ಎಸ್‌ನ ವಿವಿಧ ಸಮಿತಿಗಳ ಸದಸ್ಯರಿಗೆ ಜವಾಬ್ದಾರಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಎನ್.ಎಸ್.ಎಸ್ ಅಧಿಕಾರಿ ಕೇಶವ ಕುಮಾರ್ ಬಿ. ನೆರವೇರಿಸಿದರು.

ಕಾಲೇಜಿನ ಐ.ಕ್ಯು.ಎ.ಸಿ ಸಂಚಾಲಕ ಬಾಲಾಜಿ ಎಂ.ಪಿ, ಕನ್ನಡ ವಿಭಾಗದ ಮುಖ್ಯಸ್ಥ ಹುಚ್ಚೇಗೌಡ ಉಪಸ್ಥಿತರಿದ್ದರು. ಸ್ವಯಂಸೇವಕರಾದ ಹರ್ಷಿತಾ ಸ್ವಾಗತಿಸಿದರು. ಅನುಷಾ ವಂದಿಸಿದರು. ಅಂಜಲಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net