ದುರ್ಗಾಂಬಿಕಾ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

havana
ದುರ್ಗಾಂಬಿಕಾ ಅಮ್ಮನವರ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವೈದಿಕ ವಿಧಿಗಳು ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕಡಬ

ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 13ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ನೆರವೇರಿತು. ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪಂಚ ವಿಂಶತಿ ಕಲಶ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ರಾತ್ರಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಮತ್ತು ತಂಡ ವೈದಿಕ ಕಾರ್ಯಗಳಲ್ಲಿ ಸಹಕರಿಸಿದರು.

ದೇವಸ್ಥಾನದ ಆಡಳಿತಾಧಿಕಾರಿ, ಕಡಬ ಉಪ ತಹಸೀಲ್ದಾರ್ ಗೋಪಾಲ ಕಲ್ಲುಗುಡ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಶ್ರೀ ದುರ್ಗಾಂಬಿಕಾ ಭಜನ ಮಂಡಳಿ ಅಧ್ಯಕ್ಷ ಸೋಮಪ್ಪ ನಾಕ್, ನಿವೃತ್ತ ತಹಸೀಲ್ದಾರ್ ರಾಘವೇಂದ್ರ ಆಚಾರ್ಯ, ಪ್ರಮುಖರಾದ ರಾಮ್‌ಚರಣ್ ರೈ ಮಾಣಿಗ, ಪುಲಸ್ತ್ಯಾ ರೈ, ಸೀತಾರಾಮ ಗೌಡ ಎ, ಕಿಶನ್‌ಕುಮಾರ್ ರೈ ಪೆರಿಯಡ್ಕ, ಜಯರಾಮ ಪಡೆಜ್ಜಾರು, ಕೃಷ್ಣ ಅಲುಂಗೂರು, ದಯಾನಂದ ಗೌಡ ಆರಿಗ, ಸವಿತಾ ಕಾಮತ್, ಹೇಮಲತಾ ಕುಕ್ಕೆರೆಬೆಟ್ಟು, ಅಶೋಕ್ ಆಳ್ವ ಬೆದ್ರಾಜೆ, ಪ್ರಕಾಶ್ ಎನ್.ಕೆ, ಅಶೋಕ್‌ಕುಮಾರ್ ಪಿ.ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net