ನೇಣಿಗೆ ಶರಣಾದ ಇಬ್ಬರು ಸಹೋದರಿಯರು

Body
Published on

ಚಿಂಚೋಳಿ: ಐನಾಪುರ ಗ್ರಾಮದಲ್ಲಿ ಇಬ್ಬರು ಸಹೋದರಿಯರು ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶ್ವನಾಥ ಪಂಚಾಳ ಅವರ ಪುತ್ರಿಯರಾದ ಐಶ್ವರ್ಯ (19), ಸಾರಿಕಾ (17) ಸಾವಿಗೆ ಶರಣಾದವರು. ಸಹೋದರಿಯರು ಹುಮನಾಬಾದ್ನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಇದೀಗ ಕರೊನಾದಿಂದಾಗಿ ಕಾಲೇಜು ರಜೆ ಇರುವುದರಿಂದ ಮನೆಯಲ್ಲೇ ಇದ್ದರು.

ಇತ್ತೀಚೆಗಷ್ಟೆ ಐಶ್ವರ್ಯ ಎಂಬುವರ ನಿಶ್ಚಿತಾರ್ಥ ಆಗಿತ್ತು ಎಂದು ಹೇಳಲಾಗುತ್ತಿದೆ. ವಿಶ್ವನಾಥ ಅವರಿಗೆ ಐವರು ಪುತ್ರಿಯರಿದ್ದು, ಮೂವರ ಮದುವೆ ಆಗಿದೆ. ಐನಾಪುರದಲ್ಲಿ ಹೋಟೆಲ್ ನಡೆಸುತ್ತಿರುವ ವಿಶ್ವನಾಥ, ಸಂಜೆ ಹೋಟೆಲ್ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಇಬ್ಬರು ಮಕ್ಕಳು ನೇಣು ಬಿಗಿದುಕೊಂಡಿದ್ದರು. ಕಾರಣ ತಿಳಿದುಬಂದಿಲ್ಲ.

ಸಿಪಿಐ ಮಹಾಂತೇಶ ಪಾಟೀಲ್, ಪಿಎಸ್ಐ ರಾಜಶೇಖರ ರಾಠೋಡ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net