ಅಮ್ಯೂಸ್ ಮೆಂಟ್ ಪಾರ್ಕ್ ಉದ್ಘಾಟನೆ

inaguration
Published on

ಕುಶಾಲನಗರ:

ಪಟ್ಟಣದ ಶ್ರೀ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವದ ಅಂಗವಾಗಿ ಗುಂಡೂರಾವ್ ಜಾತ್ರಾ ಮೈದಾನದಲ್ಲಿ ಗೆಳೆಯರ ಬಳಗ ನೇತೃತ್ವದಲ್ಲಿ ಆಯೋಜಿಸಿರುವ ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಗುಂಡೂರಾವ್ ಬಡಾವಣೆಯಲ್ಲಿ ಸೇರಿರುವ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಜಾತ್ರೆಯಲ್ಲಿರುವ ವಿವಿಧ ಚಟುವಟಿಕೆಗಳು ಜನರಿಗೆ ಮನೋರಂಜನೆಯನ್ನು ನೀಡುತ್ತವೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಹಾಗೂ ಅಪಾಯ ಸಂಭವಿಸದAತೆ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಈ ವರ್ಷ ಗೆಳೆಯರ ಬಳಗದ ತಂಡದವರು ಜಾತ್ರೆಯ ನೇತೃತ್ವ ವಹಿಸಿಕೊಂಡು ವಿಭಿನ್ನವಾಗಿ ಹಾಗೂ ಆಕರ್ಷಣಿಯವಾಗಿ ಮನೋರಂಜನಾ ಚಟುವಟಿಕೆ ನಡೆಸುತ್ತಿದ್ದು, ಇದು ಗಣಪತಿ ರಥೋತ್ಸವಕ್ಕೆ ಮೆರಗು ತಂದಿದೆ. ಜಾತ್ರೋತ್ಸವ ಅಂಗವಾಗಿ ಹತ್ತು ದಿನಗಳ ಕಾಲ ಇಲ್ಲಿನ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಗೆಳೆಯರ ಬಳಗ ತಂಡದವರು ಪಟ್ಟಣದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪ ಅಲಂಕಾರ ಮಾಡಿದ್ದು, ಮೈಸೂರು ದಸರಾ ಮಾದರಿಯಲ್ಲಿ ಕಂಡು ಬಂರುತ್ತಿದೆ. ಎಲ್ಲರನ್ನೂ ಇದು ಅಕರ್ಷಿಸುತ್ತಿದೆ. ಜತೆಗೆ ವ್ಯವಸ್ಥಿತವಾಗಿ ಜಾತ್ರೆಯನ್ನು ಸಂಘಟಿಸುವ ಮೂಲಕ ಗೆಳೆಯರ ಬಳಗ ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯ ದಿನೇಶ್, ಜಯಲಕ್ಷ್ಮಿ ನಂಜುAಡಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಗೆಳೆಯರ ಬಳಗದ ಮುಖಂಡ ವಿ.ಎಸ್. ಆನಂದ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net