ತಿಮ್ಮರಾಜಿಪುರದಲ್ಲಿ ವಿವಿಧ ಕಟ್ಟಡ ಉದ್ಘಾಟನೆ

10-KGL-4
Published on

ಕೊಳ್ಳೇಗಾಲ : ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿ ಒಟ್ಟು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ವಿವಿಧ ಕಟ್ಟಡ, ಭವನಗಳನ್ನು ಶನಿವಾರ ಶಾಸಕ ಕೃಷ್ಣಮೂರ್ತಿ ಸೇವೆಗೆ ಸಮರ್ಪಿಸಿದರು.
ಗ್ರಾಮದಲ್ಲಿ 12 ಲಕ್ಷ ವೆಚ್ಚದ ಆದಿ ಜಾಂಬವ ಸಮುದಾಯ ಭವನ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಿರ್ಮಿಸಿರುವ ಗರಡಿ ಮನೆ, 8 ಲಕ್ಷ ರೂ. ವೆಚ್ಚದ ಸ್ತ್ರೀ ಶಕ್ತಿ ಭವನ, 20 ಲಕ್ಷ ರೂ. ವೆಚ್ಚದ ಕನಕ ಸಮುದಾಯ ಭವನ, ಮಡಿವಾಳ ಜನಾಂಗದ ಬೀದಿಯಲ್ಲಿ 4ಲಕ್ಷ ರೂ. ವೆಚ್ಚದ ಬಯಲು ರಂಗಮಂದಿರ, ಅಂಗನವಾಡಿ ಕೇಂದ್ರದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದ ಕೂಸಿನ ಮನೆ ಕಟ್ಟಡವನ್ನು ಅವರು ಏಕಕಾಲದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ತಿಮ್ಮರಾಜಿಪುರ ಗ್ರಾಮದಲ್ಲಿ ಸೇವೆಗೆ ಮುಕ್ತವಾಗಿರುವ ಕಟ್ಟಡ, ಭವನಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್, ತಿಮ್ಮರಾಜೀಪುರ ಗ್ರಾ.ಪಂ ಅಧ್ಯಕ್ಷೆ ರಶ್ಮಿ ರಾಜು, ಉಪಾಧ್ಯಕ್ಷೆ ಭಾಗ್ಯಮ್ಮ, ಮಾಜಿ ಅಧ್ಯಕ್ಷ ರಾಜು, ಸಿಡಿಪಿಒ ನಂಜಮಣಿ, ಕೆಆರ್‌ಐಡಿಲ್ ಎಇಇ ಚಿಕ್ಕಲಿಂಗಯ್ಯ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net