

ಸಂಡೂರು: ಕಾರ್ಖಾನೆ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವ ಕಾರ್ಯ ಆಗಬೇಕಿದೆ ಎಂದು ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕ ಎಸ್.ಎನ್.ಬಾಬು ಹೇಳಿದರು.
ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜೆಎಸ್‌ಡಬ್ಲ್ಯು ಫೌಂಡೇಷನ್‌ನ ಸೈ ್ಪರ್ ಸಂಸ್ಥೆ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ನಮ್ಮಲ್ಲಿ ನೀರಿನ ಸಮಸ್ಯೆ ಇಲ್ಲ ಆದರೂ ಗಿಡ ಬೆಳೆಸುವ ಹವ್ಯಾಸ ಯುವಕರು ಬೆಳಸಿಕೊಳ್ಳಬೇಕು. ವಷರ್ಗಳ ಹಿಂದೆ ಈ ಶಾಲೆಯ ಪರಶುರಾಮ್ ಎನ್ನುವ ಹಳೆಯ ವಿದ್ಯಾರ್ಥಿ 50ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಟ್ಟಿದ್ದರಿಂದ ಶಾಲೆ ಇಷ್ಟು ಹಸಿರಾಗಿದೆ ಎಂದರು.
ಆಸೆ ್ಪರ್ ಸಂಸ್ಥೆಯ ವಲಯ ವ್ಯವಸ್ಥಾಪಕಿ ಪರಿಮಳಾ ಮಾತನಾಡಿ, ಮಕ್ಕಳಿಗೆ ಪರಿಸರದ ಅರಿವು ಮೂಡಿಸುವುದರೊಂದಿಗೆ ಜೀವನ ಕೌಶಲ ಬೆಳೆಸುವ ಕೆಲಸ ಆಸೈ ್ಪರ್ ಸಂಸ್ಥೆ ಮಾಡುತ್ತಿದೆ. ಜೆಎಸ್‌ಡಬ್ಲ್ಯು ಫೌಂಡೇಷನ್ ಸಹಯೋಗದಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಗಿಡಗಳನ್ನು ಪೋಷಿಸುವ ಕೆಲಸವನ್ನು ವಿದ್ಯಾರ್ಥಿಗಳು ವಹಿಸಿಕೊಳ್ಳಲಿದ್ದಾರೆ ಎಂದರು.
ಸಹ ಶಿಕ್ಷಕರಾದ ಗ್ರೇಸಿ, ರಜನಿ, ಗೌಸಿಯಾ, ಶೈಕ್ ಮೈನುದ್ದೀನ್, ಪಾರ್ವತಿ, ಆರೋಗ್ಯ ನಿರೀಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಆಸೈ ್ಪರ್ ಸಂಸ್ಥೆಯ ಸಂಯೋಜಕರಾದ ಲಕ್ಷ್ಮೀಪತಿ, ಮಲ್ಲೇಶ್, ಶರಣಪ್ಪ, ಉಮೇಶ್, ಸೌಮ್ಯಾ, ಮಂಜುನಾಥ್, ಶಾಲೆ ಹಳೆ ವಿದ್ಯಾರ್ಥಿಗಳಾದ ರಂಗನಾಥ್, ಮೋಹನ್, ಪವನ್, ಎರ್ರಿಸ್ವಾಮಿ, ಆಂಜಿನೇಯಲು, ವಿನೋದ್, ಸೂರ್ಯ, ಈಶ್ವರ್ ಇತರರಿದ್ದರು.