ಯಮನಾಪುರದಲ್ಲಿ ಭಾರಿ ಬೆಂಬಲ

In Yamanapura Bhari Patak Belgaum
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪ್ರಚಾರ ನಡೆಸಿದರು.
Published on

ಬೆಳಗಾವಿ: ಮಹಾರಾಷ್ಟ್ರ ರಾಜ್ಯಸಭಾ ಸದಸ್ಯ ಧನಂಜಯ್ ಮಹಾಡಿಕ ಅವರು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ.ರವಿ ಪಾಟೀಲ ಅವರ ಪರವಾಗಿ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.
ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಅವರಿಗೆ ಯಮನಾಪುರ ಗ್ರಾಮದಲ್ಲಿ ಭಾರಿ ಬೆಂಬಲ ವ್ಯಕ್ತವಾಯಿತು. ಬೆಳಗಾವಿ ನಗರದ ಯಮನಾಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಜ್ಯಸಭಾ ಸದಸ್ಯ ಧನಂಜಯ್ ಮಹಾಡಿಕ ಅವರು, ಅಭ್ಯರ್ಥಿ ಡಾ. ರವಿ ಪಾಟೀಲ ಅವರೊಂದಿಗೆ ಯಮುನಾಪುರದ ಮತದಾರರಿಗೆ ಭಾರತೀಯ ಜನತಾ ಪಕ್ಷದ ಕಮಲದ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದರು. ಅಂಬೇಡ್ಕರ್ ಗಲ್ಲಿ, ಅಲಾರವಾಡ ಪ್ರದೇಶಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯನಡೆಸಿದರು.

ಅಂಬೇಡ್ಕರ್ ಗಲ್ಲಿಯಲ್ಲಿ ಡಾ.ರವಿ ಪಾಟೀಲ ಅವರನ್ನು ಸ್ಥಳೀಯರು ಸನ್ಮಾನಿಸಿದರು. ಡಾ.ರವಿ ಪಾಟೀಲ ಹೋದಲ್ಲೆಲ್ಲ ಆರತಿ ಮಾಡಿ, ತಿಲಕ ಇಟ್ಟು ಪ್ರೀತಿಯಿಂದ ಸ್ವಾಗತಿಸಿದರಲ್ಲದೇ, ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಡಾ.ರವಿ ಪಾಟೀಲ್ ಅವರನ್ನು ಹೆಚ್ಚಿನ ಮತಗಳಿಂದ ಈ ಭಾಗದ ಜನರು ಆಯ್ಕೆ ಮಾಡುವುದಾಗಿ ಭರವಸೆ ನೀಡಿದರು.

ಅಲಾರವಾಡ, ಮಾಳಿ ಗಲ್ಲಿ, ಆಜಾದ್ ಗಲ್ಲಿ, ತೆಂಗಿನಕರ ಗಲ್ಲಿ, ಕಸಾಯಿ ಗಲ್ಲಿ, ಕಾಮತ್ ಗಲ್ಲಿ, ಶನಿವಾರ ಕೂಟ್ ಉದ್ಯಮಿಗಳನ್ನು ಭೇಟಿ ಮಾಡಿ ಮುಂಬರುವ ಚುನಾವಣೆಯಲ್ಲಿ ಮತ ಯಾಚನೆ ಮಾಡಿದರು. ಖಂಜರಗಲ್ಲಿಯಲ್ಲಿ ಪ್ರಚಾರ ನಡೆಸಿದರು. ಡಾ.ರವಿ ಪಾಟೀಲ ಖಡೇಬಜಾರ ಮತ್ತು ನಗರದ ಕೇಂದ್ರ ಪ್ರದೇಶದಲ್ಲಿ ಎಲ್ಲಾ ವೃತ್ತಿಪರರನ್ನು ಮತದಾರರನ್ನು ಭೇಟಿ ಮತಯಾಚಿಸಿದರು.

ಪಾಂಗುಳಗಲ್ಲಿಯ ಪ್ರದೇಶದಲ್ಲಿ ಪ್ರಚಾರ ನಡೆಸಿದರು.ಈ ಸಂದರ್ಭದಲ್ಲಿ ಎಲ್ಲ ವೃತ್ತಿಪರರನ್ನು ಮತದಾರರನ್ನು ಭೇಟಿ ಮಾಡಿದಾಗ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂದು ಜನರು ತಿಳಿಸಿದರು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದ ಅವರು, ಭೋವಿ ಗಲ್ಲಿಗೆ ಬೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ನಾಗರಿಕರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಗೃಹ ಸಚಿವರ ರೋಡ್ ಶೋ ಇಂದು

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಡಾ. ರವಿ ಪಾಟೀಲ ಅವರ ಪ್ರಚಾರಾರ್ಥ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಮೇ 6ರಂದು ರೋಡ್ ಶೋ ನಡೆಸಲಿದ್ದಾರೆ. ಸಂಜೆ 5.30ಕ್ಕೆ ಧರ್ಮವೀರ ಸಂಭಾಜಿ ಚೌಕ್‌ನಿಂದ ಪ್ರಾರಂಭವಾಗಿ ಕಿರ್ಲೋಸ್ಕರ್ ರಸ್ತೆ ಕಾವೇರಿ ಕೋಲ್ಡಿಂಕ್ಸ್ ಮಾರ್ಗವಾಗಿ ಮಾರುತಿ ಗಲ್ಲಿ, ಗಣಪತ್ ಗಲ್ಲಿ ಮೂಲಕ ಸಂಯುಕ್ತ ಮಹಾರಾಷ್ಟ್ರ ಚೌಕನಲ್ಲಿ ಕೊನೆಗೊಳ್ಳಲಿದೆ. ಕಾರ್ಯಕರ್ತರು ಮತ್ತು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net