

ಯಲ್ಲಾಪುರ: ತಾಲೂಕಿನಲ್ಲಿ ಗಾಳಿ- ಮಳೆಯ ಅಬ್ಬರ ಮುಂದುವರಿದಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಶುಕ್ರವಾರ ಸಂಜೆ ವೇಳೆಗೆ ಭಾರಿ ಮಳೆ ಸುರಿದಿದ್ದು,ಹಲವೆಡೆ ಅನಾಹುತ ಉಂಟು ಮಾಡಿದೆ. ಮಾಗೋಡ ರಸ್ತೆಯ ಕವಡಿಕೆರೆ ಬಳಿ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು.
ಚಂದಗುಳಿ ಗ್ರಾ.ಪಂ. ವ್ಯಾಪ್ತಿಯ ಹುತ್ಕಂಡದ ಅಮಚಿ ಮನೆಯಲ್ಲಿ ಹಳ್ಳದ ನೀರು ತೋಟಕ್ಕೆ ನುಗ್ಗಿ ಅಡಕೆ ತೋಟ ಜಲಾವೃತವಾಗಿದೆ. ತೋಟಕ್ಕೆ ಹಾಕಿದ ಗೊಬ್ಬರ ಕೊಚ್ಚಿಕೊಂಡು ಹೋಗಿದೆ. ಸಾಸ್ಮೆಗದ್ದೆ ಭಾಗದಲ್ಲಿ ಭತ್ತದ ಗದ್ದೆಯ ಸಂಪೂರ್ಣ ಜಲಾವೃತವಾಗಿದೆ.