

ಬೆಳಗಾವಿ: ಕರ್ನಾಟಕ ಲೇಖಕಿಯರ ಸಂಘ ಪ್ರಾರಂಭವಾಗಿ ಒಂದು ವರ್ಷದಲ್ಲಿ ಯುವ ಬರಹಗಾರರಿಗೆ, ಲೇಖಕಿಯರಿಗೆ ಉಪಯುಕ್ತವಾಗುವ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಸೋಮವಾರ ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲಾ ಶಾಖೆಯ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿ, ಲೇಖಕಿಯರು ತಮ್ಮ ಬರವಣಿಗೆಯಲ್ಲಿ ಮನುಷ್ಯ ಪ್ರಜ್ಞೆ, ಪರಿಸರ ಪ್ರಜ್ಞೆ ಮತ್ತು ಕನ್ನಡ ಪ್ರಜ್ಞೆ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಡಾ.ಕೆ.ಆರ್. ಸಿದ್ದಗಂಗಮ್ಮ ಮಾತನಾಡಿದರು.
ವಾರ್ಷಿಕೋತ್ಸವದ ಅಂಗವಾಗಿ ಡಾ.ಪ್ರಜ್ಞಾ ಮತಿಹತ್ತಿ ಯಕ್ಷಗಾನದ ಜ್ವಾಲಾ ಪ್ರಸಂಗ ಪ್ರಸ್ತುತ ಪಡಿಸಿದರು. ಜ್ಯೋತಿ ಬದಾಮಿ, ಸುಮಾ ಕಿತ್ತೂರ, ಸುಧಾ ಪಾಟೀಲ, ಲಲಿತಾ ಕೊರ್ಪಡೆ, ದೀಪಿಕಾ ಚಾಟೆ, ಮೈತ್ರಾಯಿನಿ ಗದಿಗೆಪ್ಪಗೌಡರ, ಲಲಿತಾ ಕ್ಯಾಸನ್ನವರ, ಹೇಮಾ ಭರ್ಬರಿ ಇತರರಿದ್ದರು. ರೂಪಾ ಪ್ರಸಾದ ಪ್ರಾರ್ಥಿಸಿದರು. ಪ್ರೇಮಾ ತಹಸೀಲ್ದಾರ್ ಸ್ವಾಗತಿಸಿದರು. ಅಯವ್ಯಯವನ್ನು ನೀತಾ ರಾರ್ ಮಂಡಿಸಿದರು. ನಿರ್ಮಲಾ ಬಟ್ಟಲ ವಾರ್ಷಿಕ ವರದಿ ವಾಚನ ಮಾಡಿ, ನಿರೂಪಿಸಿದರು. ರಾಜನಂದಾ ಗಾರ್ಗಿ ವಂದಿಸಿದರು.