ಕುಸ್ತಿಯಲ್ಲಿ ಶ್ರೀಮಂತ ಭೋಸಲೆಗೆ ಜಯ

15Sambaragi1
Published on

ಸಂಬರಗಿ: ಸಮೀಪದ ಜಂಬಗಿ ಗ್ರಾಮದ ಮಾಳಿನಗರದಲ್ಲಿ ಹನುಮಾನ್​ ಜಯಂತಿ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಜ್ಯ ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ಚಾಂಪಿಯನ್​ ಶ್ರೀಮಂತ್​ ಭೋಸಲೆ ಹಾಗೂ ಹಾಜಿ ಇರಾನ್​ ನಡುವಿನ ಸೆಣಸಾಟದಲ್ಲಿ ಭೋಸಲೆ ಪರಾಕ್ರಮ ಮೆರೆದು 3 ಲಕ್ಷ ರೂ. ನಗದು ಹಾಗೂ ಆಂಜನೇಯ ಟ್ರೋಫಿ ತಮ್ಮದಾಗಿಸಿಕೊಂಡರು.

ಕುಸ್ತಿಪಟು ಮಹೇಶಕುಮಾರ್​ ಅಥಾಣಿ ಬೆಳ್ಳಿ ಗದೆ ಪಡೆದು ಗೆದ್ದು ವಿಜಯ ಸಾಧಿಸಿದರು. ರಕ್​ ಬೆಳಗಾವಿ ಮತ್ತು ನಿಕಿತಾ ಮುರಗುಂಡಿ ಸ್ಪರ್ಧೆಯಲ್ಲಿ ನಿಖಿತಾ ವಿಜಯಶಾಲಿಯಾದರು. ಪವನ ಕುಮಾರ್​ ಹರಿಯಾಣ, ಓಂಕಾರ್​ ವಾಮಾರೆ, ಮಿಲನ್​ ಇರಾನ್​, ಶಿವಯ್ಯ ಪೂಜಾರಿ ಮುಂತಾದ ಖ್ಯಾತ ಕುಸ್ತಿಪಟುಗಳು ಸ್ಪರ್ಧಿಸಿದ್ದರು. 64 ಕುಸ್ತಿ ಪಂದ್ಯಗಳು ನಡೆದವು. ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್​ ಸೇರಿದಂತೆ ಹಲವು ರಾಜ್ಯಗಳ ಕುಸ್ತಿಪಟುಗಳು ಆಗಮಿಸಿದ್ದರು.

ಐಪಿಎಸ್​ ಅಧಿಕಾರಿ ರವೀಂದ್ರ ಗಡಾದಿ ಪಂದ್ಯ ಉದ್ಘಾಟಿಸಿ ಮಾತನಾಡಿ, ಮಾಣಿಕ್​ ಸೂರ್ಯವಂಶಿ ಕುಸ್ತಿ ಪಂದ್ಯಾವಳಿ ಆಯೋಜಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಪ್ರತಿಯೊಂದು ಕುಟುಂಬದಲ್ಲೂ ಕುಸ್ತಿಪಟು ಹುಟ್ಟಬೇಕು ಮತ್ತು ಶಿಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಹನುಮಾನ ದೇವಸ್ಥಾನ ಟ್ರಸ್ಟ್​ ಕಮಿಟಿ ಅಧ್ಯ ಮಾಣಿಕ್​ ಸೂರ್ಯವಂಶಿ, ಕೃಷ್ಣಾಜಿ ಸೂರ್ಯವಂಶಿ, ಹುಬ್ಬಳ್ಳಿ ಗ್ರಾಮೀಣ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ಪಾಂಡುರಂಗ

ಕಿರಣಗಿ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net