ಮಹಿಳೆಯರಲ್ಲಿ ಪೌಷ್ಟಿಕಾಂಶ ಮಟ್ಟ ಹೆಚ್ಚಲಿ

30 DVD 01
ದೇವದುರ್ಗದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಉಡಿ ತುಂಬಲಾಯಿತು. ನ್ಯಾಯಾಧೀಶರಾದ ಸುರೇಶ ಅಪ್ಪಣ್ಣ ಸವದಿ, ರಫೀಕ್ ಅಹಮ್ಮದ್, ಸಿಡಿಪಿಒ ಅನಿಲ್ ಕಾಂಬ್ಳೆ, ಗಂಗಾಧರ್, ವಕೀಲ ರಾಘವೇಂದ್ರ ಇತರರಿದ್ದರು.
Published on

ದೇವದುರ್ಗ: ಕಡಿಮೆ ತೂಕ, ಅಪೌಷ್ಟಿಕದಿಂದ ಬಳಲುತ್ತಿರುವ ಮಕ್ಕಳು ಹಾಗೂ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಗರ್ಭಿಣಿ, ಬಾಣಂತಿಯರಲ್ಲಿ ಪೌಷ್ಟಿಕಾಂಶ ಮಟ್ಟ ಹೆಚ್ಚಿಸಲು ಇಂಥ ಕಾರ್ಯಕ್ರಮಗಳು ಉಪಯುಕ್ತವಾಗಲಿವೆ. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವೈದ್ಯರ ಸಲಹೆಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಬೇಕು ಎಂದರು.

ನ್ಯಾಯಾಧೀಶ ರಫೀಕ್ ಅಹಮ್ಮದ್ ಮಾತನಾಡಿ, ತಾಲೂಕಿನಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕ ಹೆಚ್ಚಾಗಿ ಕಂಡುಬರುತ್ತಿದೆ. ಬಡತನ, ಶಿಕ್ಷಣದ ಕೊರತೆ ಹಾಗೂ ಬಾಲ್ಯ ವಿವಾಹದಿಂದ ಇಂಥ ರೋಗಗಳು ಆವರಿಸುತ್ತವೆ. ಮಗುವಿನ ಆರೈಕೆಯಲ್ಲಿ ತಾಯಿ ಪಾತ್ರ ದೊಡ್ಡದಿದೆ. ಮಹಿಳೆ ಕುಟುಂಬಕ್ಕೆ ಆದ್ಯತೆ ನೀಡುವಷ್ಟೇ ತನ್ನ ಮಗುವಿನ ಆರೈಕೆ ಮಾಡಬೇಕು ಎಂದರು.

ಸಿಡಿಪಿಒ ಅನಿಲ್ ಕಾಂಬ್ಳೆ, ಪುರಸಭೆ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ್, ವಕೀಲ ರಾಘವೇಂದ್ರ, ವಸಂತ್‌ಕುಮಾರ ಬಿ.ಸೋಮನಮರಡಿ, ಗಂಗಮ್ಮ ಭೀಮೋಜಿ, ಎಎಸ್‌ಐ ಗೋಪಾಲಯ್ಯ, ಎಸಿಡಿಪಿಒ ಗಂಗಮ್ಮ, ಲಕ್ಷ್ಮೀ ರಾಠೋಡ್, ನಿರ್ಮಲಾದೇವಿ, ಶಾಂತಾಬಾಯಿ, ಲತಾ, ಶರಣಮ್ಮ, ಮಾನಮ್ಮ, ರಾಮಣ್ಣ ಎನ್.ಗಣೇಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net