ವಿಜಯಪುರದಲ್ಲಿ ಛಲವಾದಿ ಸಮಾವೇಶ

9manju4-Web
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್.ಕೆ. ಬಸವರಾಜ ಮಾತನಾಡಿದರು. ಸಿದ್ದಯ್ಯ, ವೀರಭದ್ರಪ್ಪ, ನಾರಾಯಣಸ್ವಾಮಿ ಇದ್ದರು.
Published on

ಬೆಳಗಾವಿ: ರಾಜ್ಯದಲ್ಲಿ ಛಲವಾದಿ ಸಮುದಾಯವನ್ನು ಸಂಘಟಿಸುವ ದೃಷ್ಟಿಯಿಂದ ಬರುವ ಜೂನ್ ಮೊದಲ ವಾರ ವಿಜಯಪುರದಲ್ಲಿ ಛಲವಾದಿ ಸಮುದಾಯದ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಛಲವಾದಿ ಮಹಾಸಭಾ ಸಂಚಾಲಕ ಎಚ್.ಕೆ. ಬಸವರಾಜ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ 20 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿ, ಎರಡನೇ ಹಂತದಲ್ಲಿ 8 ಜಿಲ್ಲೆಗಳಲ್ಲಿ ಪ್ರವಾಸ ಆರಂಭಿಸಲಾಗಿದೆ. ವಿಜಯಪುರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ ಎಂದರು.

ಮಹಾಸಭಾದ ಅಧ್ಯಕ್ಷ ಸಿದ್ದಯ್ಯ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗವು 2018ರಲ್ಲಿ ನಡೆಸಿದ ಜಾತಿ ಗಣತಿ ಪ್ರಕಾರ ರಾಜ್ಯದಲ್ಲಿ ಛಲವಾದಿ ಸಮುದಾಯದ ಜನಸಂಖ್ಯೆ 1.8 ಕೋಟಿ ಮೀರಿದೆ. ಆದರೆ, 2011ರ ಜನಗಣತಿ ಪ್ರಕಾರ 96 ಲಕ್ಷ ಇದೆ. ಇದರಲ್ಲಿ ಮಾದಿಗ, ಲಂಬಾಣಿ, ಭೋವಿ ಇತರ ವರ್ಗಗಳು ಇವೆ. ಛಲವಾದಿ ಸಮುದಾಯದ ಜನಸಂಖ್ಯೆ 10 ಲಕ್ಷಕ್ಕೂ ಹೆಚ್ಚಿದ್ದು, ಈ ಕುರಿತು ನಿಖರವಾದ ಸಮೀಕ್ಷೆ ಆಗಬೇಕಿದೆ ಎಂದರು.

ಉತ್ತರ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಛಲವಾದಿ ಸಮುದಾಯದ ಸಂಘಟನೆಗೆ ಆದ್ಯತೆ ನೀಡಲಾಗಿದೆ. ಮುಂಬೈ ಕರ್ನಾಟಕದ 7 ಜಿಲ್ಲೆಗಳಲ್ಲಿ ಛಲವಾದಿ ಸಮುದಾಯದ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೀರಭದ್ರಪ್ಪ, ನಾರಾಯಣಸ್ವಾಮಿ, ಎಂ.ಮಹಾದೇವ, ದುರ್ಗೇಶ ಮೇತ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net