ಒಗ್ಗಟ್ಟಿನಲ್ಲಿ ಅಡಗಿದೆ ಸಮುದಾಯದ ಅಭಿವೃದ್ಧಿ

17GKK2a
Published on

ಗೋಕಾಕ: ಜಗತ್ತು ಸುಂದರವಾಗಿ ನಿರ್ಮಿಸುವಲ್ಲಿ ವಿಶ್ವಕರ್ಮರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

ನಗರದ ಮಹಾಲಕ್ಷ್ಮೀ ಸಭಾಭವನದಲ್ಲಿ ತಾಲೂಕಾಡಳಿತ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸೇವಾ ಸಂಘ, ಕಾಳಿಕಾದೇವಿ ದೇವಸ್ಥಾನ ವಿಶ್ವಸ್ಥ ಮಂಡಳಿ ಮತ್ತು ಸುವರ್ಣಕಾರರು ಹಾಗೂ ಚಿನ್ನ, ಬೆಳ್ಳಿ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಮಾನವರ ಬದುಕಿಗೆ ಬೇಕಾದ ಅವಶ್ಯಕ ವಸ್ತುಗಳ ನಿರ್ಮಾತೃ ವಿಶ್ವಕರ್ಮರಾಗಿದ್ದಾರೆ ಎಂದರು.

ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿಶ್ವಕರ್ಮ ಭಾವಚಿತ್ರ ಪೂಜಿಸಿ ಕುಂಭಮೇಳದ ಮೆರವಣಿಗೆಗೆ ಚಾಲನೆ ನೀಡಿದರು. ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಯುವನಾಯಕ ಸರ್ವೋತ್ತಮ ಜಾರಕಿಹೊಳಿ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಸಿಪಿಐ ಸುರೇಶಬಾಬು, ಭೀಮಶಿ ಭರಮನ್ನವರ, ವಿಕಾಸ ನಾಯಕ, ಮುಖಂಡರಾದ ಪ್ರಕಾಶ ಕಂಬಾರ, ಸಂತೋಷ ಮುಗಳಿಹಾಳ, ವಿನಾಯಕ ಪೋತದಾರ, ಸುರೇಶ ಪತ್ತಾರ, ವಿನಾಯಕ ಚಿಪ್ಪಲಕಟ್ಟಿ, ಮಂಗಲಾ ಬಡಿಗೇರ, ಸುಜಾತಾ ಪತ್ತಾರ, ಸುನೀತಾ ಬಡಿಗೇರ, ರೂಪಾ ಪತ್ತಾರ, ವಿಜಯ ಬಡಿಗೇರ, ಸುಭಾಸ ಪೋತದಾರ, ಸುಭಾಸ ಸತ್ತಿಗೇರಿ, ಪ್ರಕಾಶ ಕಂಬಾರ, ಸುರೇಶ ಸತ್ತಿಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net