ಸಕಾಲದಲ್ಲಿ ಸಾಲ ಮರುಪಾವತಿಸಲಿ

22Kabbur1
ಜಾಗನೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಗೆ ಗಣ್ಯರು ಚಾಲನೆ ನಿಡಿದರು.ಪೃಥ್ವಿ ಕತ್ತಿ, ಮಂಜುನಾಥ ಸ್ವಾಮೀಜಿ, ಲಕ್ಕಪ್ಪ ಹನುಮನ್ನವರ, ಹನುಮಂತ ರಬಕವಿ ಇತರರಿದ್ದರು.
Published on

ಕಬ್ಬೂರ: ಸಕಾಲದಲ್ಲಿ ಸಾಲ ಮರುಪಾವತಿಸಿ ಸಂಘದ ಪ್ರಗತಿಗೆ ಶ್ರಮಿಸಬೇಕು ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ನಿಗಮದ ಅಧ್ಯಕ್ಷ ಪೃಥ್ವಿ ಕತ್ತಿ ಹೇಳಿದರು.

ಸಮೀಪದ ಜಾಗನೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 70ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ರವಿಂದ್ರ ಅಲಗೂರೆ ಮಾತನಾಡಿ, ಸಂವು 1.43 ಕೋಟಿ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಲಾಭಾಂಶ ವಿತರಿಸಲಾಗುವುದು. ಸಂಘದಲ್ಲಿ 2,650 ಸದಸ್ಯರಿದ್ದು, 1.79 ಕೋಟಿ ರೂ. ಷೇರು ಬಂಡವಾಳ, 6 ಕೋಟಿ ರೂ. ನಿಧಿ, 38.90 ಕೋಟಿ ರೂ. ಠೇವು ಹೊಂದಿದೆ. ಸದಸ್ಯರಿಗೆ 50.65 ಕೋಟಿ ರೂ. ಸಾಲ ವಿತರಿಸಿ ಸಕಾಲಕ್ಕೆ ಮರುಪಾವತಿಸಿಕೊಳ್ಳಲಾಗಿದೆ ಎಂದರು.

ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಶಿಕ್ಷಣ ಮುಖ್ಯವಾಗಿದೆ ಎಂದರು. ಬೆಂಗಳೂರು ಆದಾಯ ತೆರಿಗೆ ಇಲಾಖೆಯ ಐಆರ್‌ಎಸ್ ಲಕ್ಕಪ್ಪ ಹನುಮನ್ನವರ, ಸಂಘದ ಅಧ್ಯಕ್ಷ ಹನುಮಂತ ರಬಕವಿ, ಉಪಾಧ್ಯಕ್ಷ ರಾಮಪ್ಪ ಪುಕಾಟೆ, ಮುತ್ತಪ್ಪ ಹನುಮನ್ನವರ, ಪರಸಪ್ಪ ಕರಿಕಟ್ಟಿ, ರಬಸಿದ್ದ ವಡೇರಟ್ಟಿ, ಸಿದ್ದಪ್ಪ ಹಣಜಾನಟ್ಟಿ, ರಾಯಪ್ಪ ಹನುಮನ್ನವರ, ದೀಲಿಪ ಚೌಲಗೇರ, ಪರಸಪ್ಪ ಹನುಮನ್ನವರ, ಬ್ಯಾಂಕ್ ನಿರೀಕ್ಷಕ ಬಸವರಾಜ ಉತ್ತೂರೆ, ಸೈದಪ್ಪ ಗದಾಡೆ, ಶಿವರಾಯಿ ಸನದಿ, ಲಕ್ಷ್ಮಣ ಮಂಗಿ, ಗ್ರಾಪಂ ಅಧ್ಯಕ್ಷ ಮಹಾಂತೇಶ ಶಿರಗೂರ, ಲಕ್ಷ್ಮಣ ಹನುಮನ್ನವರ, ಮಹೇಂದ್ರ ಖೆಮಲಾಪುರೆ, ಮಲ್ಲೇಶ ಹನುಮಂತಗೋಳ, ಮಾರುತಿ ಹಮ್ಮಾರ, ಹನುಮಂತ ಕರಿಕಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net