

ಕಬ್ಬೂರ: ಪಟ್ಟಣದ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಎ.ಬಿ.ಬೆಲ್ಲದ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜು ವಿದ್ಯಾರ್ಥಿಗಳು ಈಚೆಗೆ ಚಿಕ್ಕೋಡಿಯಲ್ಲಿ ಜರುಗಿದ ತಾಲೂಕುಮಟ್ಟದ ಥ್ರೋಬಾಲ್‌ನಲ್ಲಿ ದ್ವೀತಿಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರಾದ ಶ್ರೀನಿಧಿ ಇನಾಮದಾರ, ಗೌರವ್ವ ನಾಯಿಕ, ಸಂಜನಾ ಗೌರಾಯಗೋಳ, ನೀಲಾ ರುದ್ರನ್ನವರ, ಸೃಷ್ಠಿ ಮಗದುಮ, ಸಂಸ್ಥೆ ಅದ್ಯಕ್ಷ ಮಹೇಶ ಬೆಲ್ಲದ, ಕಾರ್ಯದರ್ಶಿ ಡಾ.ಪ್ರಕಾಶ ಬೆಲ್ಲದ, ಪ್ರಾಚಾರ್ಯ ಮಹೇಂದ್ರ.ಕೆ.ಆರ್. ಇತರರಿದ್ದರು.