

ಲಿಂಗಸುಗೂರು: ರಾಜ್ಯ ವಿವಿಧ ಜಿಲ್ಲೆಗಳಿಂದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುವ ಭಕ್ತರಿಗಾಗಿ ತಾಲೂಕಿನ ಈಚನಾಳ ಗ್ರಾಮಸ್ಥರು ದಾಸೋಹ ಮತ್ತು ವಸತಿ ವ್ಯವಸ್ಥೆ ಮಾಡಿದ್ದಾರೆ.
ಗ್ರಾಮಸ್ಥರು ಕಂಬಿ ಮಲ್ಲಿಕಾರ್ಜುನ ದೇವರಿಗೆ ಪೂಜೆ ಸಲ್ಲಿಸಿ ನಂದಿ ಬಸವೇಶ್ವರ ದೇವಸ್ಥಾನ ಮತ್ತು ಪ್ರಮುಖ ಸ್ಥಳಗಳಲ್ಲಿ ಭಾನುವಾರು ಸುಮಾರು 150 ಜನ ಪಾದಯಾತ್ರಿಗಳಿಗೆ ದಾಸೋಹ ಮತ್ತು ವಸತಿ ಸೌಲಭ್ಯ ಕಲ್ಪಿಸಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಗ್ರಾಮದ ಮುಖಂಡರಾದ ಅಮರಯ್ಯಸ್ವಾಮಿ, ಅಮರಪ್ಪ ಗಡ್ಡಿ, ಕುಮಾರಸ್ವಾಮಿ, ರುದ್ರಗೌಡ ಹೊಸಮನಿ, ಶಂಕರಗೌಡ ಹೊಸಮನಿ, ನಾಗನಗೌಡ, ಅಮರೇಶ ಮೇಟಿ, ನಾಗರಡ್ಡಿ ಪಾಟೀಲ್, ಬಸವರಾಜ ಹಡಪದ, ಶರಣಬಸವ ಮೇಟಿ, ಪಿಡ್ಡಪ್ಪ ಪೂಜಾರಿ, ದೇವರಡ್ಡಿ ಮೇಟಿ, ನಬೀಸಾಬ್, ಹೇಮರಡ್ಡಿ, ಸುನೀಲ್, ರಮೇಶ, ಹನುಮಂತ, ಅನಿಲ್ ಕುಮಾರ ಇದ್ದರು.