ವರ್ಷದಲ್ಲಿ ರೈಲ್ವೆ ಮೇಲ್ಸೇತುವೆ ಪೂರ್ಣ ಸಿದ್ದಾರ್ಥ ಸಿಂಗ್ ಭರವಸೆ

BJP 2ND
ಹೊಸಪೇಟೆ ಸಮೀಪದ ಗಾದಿಗನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಸೋಮವಾರ ಮತಯಾಚನೆ ಮಾಡಿದರು.
Published on

ಹೊಸಪೇಟೆ:ಸ್ಥಳೀಯ ಅನಂತಶಯನ ಗುಡಿ ಸಮೀಪದ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ವರ್ಷದೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಭರವಸೆ ನೀಡಿದರು.

ತಾಲೂಕಿನ ಗಾದಿಗನೂರಿನಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಅನಂತ ಶಯನಗುಡಿ ಬಳಿ ರೈಲ್ವೇ ಗೇಟ್ ಹಾಕುವುದರಿಂದ ಪ್ರತಿ ಬಾರಿ 15 ನಿಮಿಷ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಆಸ್ಪತ್ರೆಗೆ, ಶಾಲಾ- ಕಾಲೇಜು, ಸರ್ಕಾರಿ ಕಚೇರಿಗೆ ತೆರಳುವ ನೌಕರರು, ಪ್ರಯಾಣಿಕರು ಸೇರಿದಂತೆ ಎಲ್ಲರೂ ತೊಂದರೆ ಅನುಭವಿಸುತ್ತಿದ್ದರು. ಇದನ್ನು ತಪ್ಪಿಸಲು ಆನಂದ್ ಸಿಂಗ್ ಕೇಂದ್ರ ಸರ್ಕಾರದ ಸಹಯೋಗದಲ್ಲಿ 33 ಕೋಟಿ ರೂ. ಅನುದಾನದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದು, ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ ಎಂದು ಹೇಳಿದರು.

ಜೋಳದ ರಾಶಿ ಗುಡ್ಡ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ವಿಜಯನಗರದ ಕೀರ್ತಿಯನ್ನು ಪ್ರಪಂಚಕ್ಕೆ ಸಾರಿದ ಶ್ರೀಕೃಷ್ಣದೇವರಾಯರ 54 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲಾಗುತ್ತಿದೆ. ಸಿದ್ಧಿಪ್ರಿಯಾ ಕಲ್ಯಾಣ ಮಂಟಪದ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಶೀಘ್ರವೇ ಪ್ರತಿಷ್ಠಾಪಿಸಲಾಗುವುದು ಎಂದರು.

ಜಂಬುನಾಥ ಹಳ್ಳಿಯಲ್ಲಿ ಪ್ರಚಾರ ಭಾಷಣ ಮಾಡಿದ ಸಿದ್ಧಾರ್ಥ ಸಿಂಗ್, ಆರ್.ಪಿ.ಮೈನ್ಸ್ ನ ಶರಣಪ್ಪ ಸಾಹುಕಾರ ಅವರು ಇಲ್ಲಿನ 54 ಕುಟುಂಬಗಳ ಆಶ್ರಯಕ್ಕಾಗಿ 1.20 ಎಕರೆ ಪ್ರದೇಶವನ್ನು ನೀಡಿದ್ದರೆ. ಈ ಭಾಗಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಬಡ ಕುಟುಂಬಗಳಿಗೆ ಆಸರೆ

ಬಿಜೆಪಿ ಮುಖಂಡ ಶಿವಕುಮಾರ್ ಮಾತನಾಡಿ, ಸಚಿವ ಆನಂದ ಸಿಂಗ್ ಅವರು ಬೋರ್‌ವೆಲ್ ಕೊರೆಯಿಸಿ ನೀರಿನ ಸೌಲಭ್ಯ ಒದಗಿಸಿದ್ದಾರೆ. ಮನೆಗಳು ನಿರ್ಮಿಸಿಕೊಟ್ಟರೆ, ಬಡ ಕುಟುಂಬಗಳಿಗೆ ಆಸರೆಯಾಗುತ್ತದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಂಕರ ಮೇಟಿ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ದೇವೇಂದ್ರಪ್ಪ, ಗ್ರಾಪಂ ಸದಸ್ಯ ವೀರಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಕೆ.ಗಾದಿಲಿಂಗಪ್ಪ, ಶಂಕ್ರಪ್ಪ, ಶರಣಕುಮಾರ್, ಗೌರಪ್ಪ, ಎನ್.ಸ್ವಾಮಿ, ಎಂ.ತಿಮ್ಮಪ್ಪ, ಎಚ್.ದುರಗಪ್ಪ, ಕೆ.ರೂಪಾ, ಎಂ.ಗೋವಿಂದ, ನಗರ ಜಂಬುನಾಥ, ಮಲ್ಲಪ್ಪ, ರಫಿಕ್, ತಾಯಪ್ಪ ಹಾಗೂ ಇಮಾಮ್ ಸಾಬ್, ಕೋರಿ ಫಕೀರಪ್ಪ, ಗುಜ್ಜಲ ಶ್ರೀನಿವಾಸ, ಓಬಳಾಪುರ ತಿಮ್ಮಣ್ಣ ಮಾತನಾಡಿ, ಸಮಾಜ ಸೇವೆಯಿಂದ ಮನೆ ಮಾತಾಗಿರುವ ಸಿದ್ದಾರ್ಥಸಿಂಗ್ ಗೆ ಮತ ನೀಡಿ ಗ್ರಾಮದ ಮತ್ತಷ್ಟು ಅಭಿವೃದ್ಧಿಗೆ ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ವಿನಂತಿಸಿದರು.ಆನಂದ ಸಿಂಗ್ ಸಹೋದರ ಈಶ್ವರ ಸಿಂಗ್ ಹಾಗೂ ಇತರರಿದ್ದರು.

ಇದೇ ವೇಳೆ ಪಾಪಿನಾಯಕಹಳ್ಳಿ, ಚಿನ್ನಾಪೂರ, ಜಿಜಿ ಕ್ಯಾಂಪ್ ನಲ್ಲಿ ಸಿದ್ದಾರ್ಥಸಿಂಗ್ ಮತಯಾಚಿಸಿದರು. ಅಭಿಮಾನಿಗಳಿಂದ ಕುರಿ ಉಡುಗೊರೆಸಮೀಪದ ಗಾದಿನೂರಿನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಗೆ ರಸ್ತೆ ಯುದ್ದಕ್ಕೂ ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಬಹಿರಂಗ ಸಭೆಯಲ್ಲಿ ಗ್ರಾಮದ ಯುವಕರು ಸಿದ್ದಾರ್ಥಸಿಂಗ್‌ಗೆ ಕಂಬಳಿ ಹೊದಿಸಿ ಸನ್ಮಾನಿಸಿದರೆ, ಗ್ರಾಮದ ಮುಖಂಡ ಸಾಹುಕಾರ ಬಸವರಾಜ ಎಂಬುವವರು ಕುರಿಮರಿ ಉಡುಗೊರೆಯಾಗಿ ನೀಡಿ ಅಭಿಮಾನ ಮೆರೆದರು.

ಆನಂದ ಸಿಂಗ್ ನಿವೃತ್ತಿ ಹೊಂದಿಲ್ಲ

ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರದಿಂದ ಸಚಿವ ನಿವೃತ್ತಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಯುವ ಶಕ್ತಿಯ ಪ್ರೋತ್ಸಾಹ, ಬಿಜೆಪಿ ಪಕ್ಷದ ನಿರ್ಧಾರದಿಂದ ನಾನು ಸ್ಪರ್ಧಿಸಿದ್ದೇನೆ. ಜನಸೇವೆಯನ್ನೇ ಉಸಿರಾಡುತ್ತಿರುವ ಆನಂದ್ ಸಿಂಗ್ ಅವರು ಯಾವತ್ತೂ ಸಮಾಜಮುಖಿಯಾಗಿ ಜನಸೇವಕರಾಗಿ ಇರುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net