

ಕಂಪ್ಲಿ: ಇಲ್ಲಿನ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಕೋನಂಕಿ ಪ್ರಣವಿ ಅವರು ಬಲಗೈ ತೋರು ಬೆರಳನ್ನು 37 ಸೆಕೆಂಡ್‌ಗಳಲ್ಲಿ 50 ಸಲ ನಿರಂತರವಾಗಿ ಮುರಿದು ಶಬ್ದ ಬರಿಸುವ ಮೂಲಕ 2024ರ ಏಪ್ರಿಲ್ 26ರಂದು ವರ್ಲ್ಡ್‌ವೈಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ದಾಖಲಾಗಿದ್ದಾಳೆ.
ಪಟ್ಟಣದ ಕೋನಂಕಿ ಸ್ವರ್ಣಲತಾ ವೆಂಕಟೇಶ್ವರಲು ದಂಪತಿ ಪುತ್ರಿಯಾದ ಪ್ರಣವಿ, ಶಿಕ್ಷಣದ ಜತೆಗೆ ಚಿತ್ರಕಲೆ, ಪೇಂಟಿಂಗ್ ಮತ್ರು ಕ್ರಾಫ್ಟ್‌ವರ್ಕ್ಸ್‌ನಲ್ಲಿ ಪ್ರತಿಭಾವಂತೆ. ವಿದ್ಯಾರ್ಥಿನಿ ಸಾಧನೆಗೆ ಪ್ರಾಚಾರ್ಯ ಪಿ.ನಾಗೇಶ್ವರರಾವ್, ಉಪ ಪ್ರಾಚಾರ್ಯ ಪಿ.ಸಾಯಿಕಿಶೋರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಣವಿಗೆ ವೈದ್ಯೆಯಾಗುವ ಗುರಿಯಿದೆ. ಡಿಮಿಟ್ರಿ ಮೆಂಡಲೀವ್‌ನ ರಾಸಾಯನಶಾಸ್ತ್ರದ ಸಂಕೇತವಾದ ಆವರ್ತಕ ಕೋಷ್ಟಕದ (ಪಿರಿಯೊಡೆಕ್ ಟೇಬಲ್) ಎಲ್ಲ ಅಂಶಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಹೇಳಿ ಜಾಗತಿಕ ದಾಖಲೆ ಮಾಡುವ ಆಶಯ ಹೊಂದಿದ್ದಾಳೆ.