

ಮೂಡಲಗಿ: ವಿಭಿನ್ನ ಮತ್ತು ಶಿಸ್ತಿನ ಪಕ್ಷವಾಗಿರುವ ಬಿಜೆಪಿ 12 ಕೋಟಿ ಸದಸ್ಯತ್ವ ಪಡೆದು ಪ್ರಪಂಚದ ಅತ್ಯಂತ ದೊಡ್ಡ ಪಕ್ಷವಾಗಿ ಬೆಳೆಯುತ್ತಿದೆ ಎಂದು ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ತಾಲೂಕಿನ ಅರಬಾವಿ ವ್ಯಾಪ್ತಿಯ ಗೊಕಾಕ ಸಪ್ಲಾಯರ್ಸ್ ಕಲ್ಯಾಣ ಮಂಟಪದಲ್ಲಿ ಈಚೆಗೆ ಜರುಗಿದ ಜಿಲ್ಲಾ
ಬಿಜೆಪಿ ಚುನಾಯಿತ ಪ್ರತಿನಿಧಿಗಳ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸಮಾಜದಲ್ಲಿ ಕೈಗೊಳ್ಳುವ ಕಾರ್ಯ, ಜನಸಂಪರ್ಕ, ಪಕ್ಷದ ಇತಿಹಾಸ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವ ಮಹತ್ತರ ಕಾರ್ಯ ಪ್ರಶಿಕ್ಷಣ ವರ್ಗದಿಂದ ನಿರಂತರ ನಡೆಯುತ್ತದೆ ಎಂದರು.
ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ಬಿಜೆಪಿ ಸಂಪರ್ಕಕ್ಕೆ ಬರುವ ಎಲ್ಲ ಸದಸ್ಯರಿಗೂ ಬಿಜೆಪಿಯ ಇತಿಹಾಸ, ರಾಷ್ಟ್ರಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ ಎನ್ನುವ ರಾಷ್ಟ್ರಪ್ರೇಮ ಬೆಳೆಸಲಾಗುತ್ತದೆ ಎಂದರು.
ರಾಜ್ಯ ಪ್ರಶಿಕ್ಷಣಾ ವರ್ಗದ ಸದಸ್ಯ ಶಶಿಕಾಂತ ವಿಶ್ವಬ್ರಾಹ್ಮಣ, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ, ಸಂದೀಪ್ ದೇಶಪಾಂಡೆ, ಮಂಡಲ ಅಧ್ಯಕ್ಷರಾದ ಮಹಾದೇವ ಶೆಕ್ಕಿ, ರಾಜೇಂದ್ರ ಗೌಡಪ್ಪಗೋಳ ಇದ್ದರು. ಪರಸಪ್ಪ ಬಬಲಿ ಸ್ವಾಗತಿಸಿದರು. ಎಫ್.ಎಸ್.ಸಿದ್ದನಗೌಡರ ನಿರೂಪಿಸಿ, ವಂದಿಸಿದರು. ಬೈಲಹೊಂಗಲ, ಸವದತ್ತಿ, ಮುನವಳ್ಳಿ, ಖಾನಾಪುರ, ರಾಮದುರ್ಗ, ಮೂಡಲಗಿ, ನಾಗನೂರ, ಕಲ್ಲೋಳಿ, ಮೂಡಲಗಿ, ಕೊಣ್ಣೂರ ಪಪಂ, ಪುರಸಭೆ ಬಿಜೆಪಿ ಚುನಾಯಿತ ಪ್ರತಿನಿಧಿಗಳು, ಮಂಡಲ ಪದಾಧಿಕಾರಿಗಳು ಇದ್ದರು.