

ಹುಬ್ಬಳ್ಳಿ: ಕೆಎಲ್‌ಇ ಅಂತರ ಕಾಲೇಜ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಇಲ್ಲಿಯ ಜೆ.ಜಿ. ಕಾಮರ್ಸ್ ಕಾಲೇಜ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆಯುವುದಲ್ಲದೇ ಸಿಂಗಲ್ ಮತ್ತು ಡಬಲ್ ಬ್ಯಾಡ್ಮಿಂಟನ್ ಸ್ಪಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ಕಾಲೇಜ್‌ಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜ್‌ನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರಾದ ಪ್ರೊ.ಎಸ್.ಎಲ್. ಪಾಟೀಲ, ಡಾ. ದತ್ತು ವಾಘಮೋಡೆ, ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಬಿ. ಪಾಟೀಲ, ಬಸವರಾಜ ಇಮ್ಮಡಿ, ಕಾಲೇಜ್ ಒಕ್ಕೂಟದ ಉಪಾಧ್ಯಕ್ಷರಾದ ಪ್ರೊ.ಮಲ್ಲಮ್ಮ ಯಾಟಗಲ್, ಪ್ರೊ. ಸೋಮಶೇಖರ ಎಚ್. ಮತ್ತು ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.