ಹೋಬಳಿಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ

25 DVD 02
ದೇವದುರ್ಗದಲ್ಲಿ ಶಿರಸ್ತೇದಾರ್ ಭೀಮರಾಯ ಮೇಟಿಗೆ ರೈತ ಸಂಘ, ಹಸಿರು ಸೇನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಮುಖಂಡರಾದ ತಿಮ್ಮನಗೌಡ ಗೌರಂಪೇಟೆ, ಬಸವರಾಜ ಸ್ವಾಮಿ, ರಮೇಶ ನಾಯಕ ಸಿಪ್ಪತಗೇರಾ, ಸೂಗೂರೆಡ್ಡಿ, ರೆಡ್ಡಿ ಚಡಕಲಗುಡ್ಡ, ಅಲ್ಲಾವುದ್ದೀನ್ ಇತರರಿದ್ದರು.
Published on

ದೇವದುರ್ಗ: ಮುಕ್ತ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಕುಸಿದಿದ್ದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ತಾಲೂಕು ಘಟಕ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲೂಕು ಸೇರಿ ರಾಜ್ಯದ ವಿವಿಧೆಡೆ ಅತಿವೃಷ್ಟಿ ನಡುವೆಯೂ ರೈತರು ಹತ್ತಿ ಬೆಳೆ ಬೆಳೆದಿದ್ದಾರೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಸಂಪೂರ್ಣ ಕುಸಿತವಾಗಿದೆ. ಇದರಿಂದ ರೈತರಿಗೆ ಭಾರಿ ನಷ್ಟವಾಗಲಿದೆ. ಬಿತ್ತನೆ ಬೀಜ, ರಸ ಗೊಬ್ಬರ, ಕೂಲಿ ಸೇರಿ ಎಕರೆಗೆ 35ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಬೆಳೆ ಕೈಗೆ ಬಂದಿದ್ದರೂ ಬೆಲೆ ಇಲ್ಲದೆ ನಷ್ಟವಾಗುತ್ತಿದೆ. ಖರೀದಿ ಕೇಂದ್ರ ತೆರೆಯಬೇಕಾದ ಸರ್ಕಾರಗಳು ರೈತರನ್ನು ಕಡೆಗಣಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಎಲ್ಲ ಹೋಬಳಿ ಕೇಂದ್ರದಲ್ಲಿ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಪ್ರತಿಕ್ವಿಂಟಾಲ್‌ಗೆ ಕನಿಷ್ಠ 10 ಸಾವಿರ ರೂ. ಬೆಲೆ ನಿಗದಿ ಮಾಡಬೇಕು. ನಿರ್ಲಕ್ಷೃ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ನಾಗರಾಜ ತೆಗ್ಗಿಹಾಳ, ಸುರೇಶಗೌಡ, ಹನುಮಂತ್ರಾಯ ಸಿಪ್ಪತಗೇರಾ, ನಾಗರಾಜ ತಳವಾರದೊಡ್ಡಿ, ತಿಪ್ಪರಾಯ, ಹರ್ಷವರ್ಧನ್ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net