ಭಾರತೀಯರು ಸುರಕ್ಷಿತವಾಗಿರಲು ಸೇನೆ ಕಾರಣ

krt-2
ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ಕಾರಟಗಿಯಲ್ಲಿ ತಿರಂಗಾ ಯಾತ್ರೆ ನಡೆಸಿದರು. ಹಿರೇಮಠದ ಮರಳಸಿದ್ದಯ್ಯ ಸ್ವಾಮೀಜಿ, ತೆಲೆಖಾನ ಹಿರೇಮಠದ ವೀರಭದ್ರಯ್ಯ ಸ್ವಾಮೀಜಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮೌನೇಶ್ ದಢೇಸೂಗೂರು, ಮುಖಂಡರಾದ ಚಂದ್ರಶೇಖರ ಮುಸಾಲಿ, ಶಿವಪುತ್ರಯ್ಯ ತಾತ, ಸುರೇಶ ರಾಠೋಡ, ಧನಂಜಯ, ಶರಬಸವರೆಡ್ಡಿ, ದೇವರಾಜ ನಾಯಕ ಇತರರಿದ್ದರು.
Published on

ಕಾರಟಗಿ: ಉಗ್ರರ ವಿರುದ್ಧ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ‘ಆಪರೇಷನ್ ಸಿಂಧೂರ, ಭಾರತ ಭಯೋತ್ಪಾದಕರನ್ನು ಸೋಲಿಸಲಿದೆ ಎನ್ನುವ ಘೋಷವಾಕ್ಯದಡಿ ಪಟ್ಟಣದಲ್ಲಿ ಶುಕ್ರವಾರ ತಿರಂಗಾಯಾತ್ರೆ ನಡೆಸಿದರು.

ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಭಾರತೀಯ ನಾಗರಿಕರನ್ನು ಅಮಾನುಷವಾಗಿ ಹತ್ಯೆಗೈದ ಉಗ್ರರಿಗೆ ತಕ್ಕ ಪಾಠ ಕಲಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಆಪರೇಷನ್ ಸಿಂಧೂರ ಮೂಲಕ ಸೇನೆ ತನ್ನ ತಾಕತ್ತನ್ನು ಇಡೀ ವಿಶ್ವಕ್ಕೆ ಪರಿಚಯಿಸಿದೆ.

ಉಗ್ರರ ದಮನ ಮಾಡುವ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ್ದು, ದೇಶವೇ ಸಂಭ್ರಮಿಸಬೇಕಾದ ವಿಷಯ. ದೇಶದ ವಿಚಾರದಲ್ಲಿ ನಾವುಗಳು ಯಾವತ್ತೂ ರಾಜಕಾರಣ ಮಾಡಬಾರದು. ನಾವಿಂದು ಸುರಕ್ಷಿತವಾಗಿರಲು ಭಾರತೀಯ ಸೇನೆಯೇ ಕಾರಣ. ಈ ಹಿನ್ನೆಲೆಯಲ್ಲಿ ಸೇನೆಗೆ ಗೌರವ ಸಲ್ಲಿಸಲು ತಿರಂಗಾಯಾತ್ರೆ ಕೈಗೊಂಡಿದ್ದೇವೆ ಎಂದರು.

ಹಿರೇಮಠದ ಮರಳಸಿದ್ದಯ್ಯ ಸ್ವಾಮೀಜಿ ಹಾಗೂ ತೆಲೆಖಾನ್ ಹಿರೇಮಠದ ವೀರಭದ್ರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮೌನೇಶ್ ದಢೇಸೂಗೂರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ, ಮುಖಂಡರಾದ ಚಂದ್ರಶೇಖರ ಮುಸಾಲಿ, ಶಿವಪುತ್ರಯ್ಯ ತಾತ, ಸುರೇಶ ರಾಠೋಡ, ಧನಂಜಯ, ಶರಬಸವರೆಡ್ಡಿ, ದೇವರಾಜ ನಾಯಕ , ಮಂಜುನಾಥ್ ನಾಯಕ, ಸೋಮಣ್ಣ ಉಡಮಕಲ್, ಆನಂದ ಕುಲಕರ್ಣಿ, ರಮೇಶ್ ಹುಲ್ಕಿಹಾಳ, ರವಿ ತಿಮ್ಮಾಪುರ, ಅಕ್ಕಮಹಾದೇವಿ, ಪ್ರಿಯಾಂಕಾ ಪವರ್, ಶಿಲ್ಪಾ ದಿವಾಟರ್, ನಾಗರತ್ನ ಬಪ್ಪುರ್, ಶಕುಂತಲಾ ದಿವಟರ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net