

ಕೊಳವಿ: ಗ್ರಾಮದ ಗೂಳಿ ಬಸವೇಶ್ವರ ಹಾಗೂ ಬೀರಸಿದ್ದೇಶ್ವರ ಕಾರ್ತಿಕೋತ್ಸವ ನಿಮಿತ್ತ ಬುಧವಾರ ಏರ್ಪಡಿಸಿದ್ದ ರಾಜ್ಯಮಟ್ಟದ ತೆರೆ ಬಂಡಿ ಸ್ಪರ್ಧೆಯಲ್ಲಿ ಮಹಾಲಿಂಗಪುರದ ಮಲ್ಲನಗೌಡ ಪಾಟೀಲ ಅವರು ಪ್ರಥಮ ಸ್ಥಾನ ಪಡೆದು ಎಚ್ಎಫ್ ಹೋಂಡಾ ಡಿಲಕ್ಸ್ ಬೈಕ್ ತಮ್ಮದಾಗಿಸಿಕೊಂಡರು. ಅನುಕ್ರಮವಾಗಿ ಒಂಟಗೋಡಿಯ ಭೀಮಶಿ ಐನಾಪುರ 7ಗ್ರಾಂ ಚಿನ್ನದ ಪದಕ ಹಾಗೂ ಮುಧೋಳದ ಸಾಗರ ಅನುಗೂಜಿ 5ಗ್ರಾಂ ಚಿನ್ನದ ಪದಕದೊಂದಿಗೆ ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದರು. ಒಟ್ಟು 15 ಜನರಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನ ಸ್ವೀಕರಿಸಿ ಮಲ್ಲನಗೌಡ ಪಾಟೀಲ ಮಾತನಾಡಿ, ಶ್ರೀಗೂಳಿ ಬಸವೇಶ್ವರ ಕಪೆಯಿಂದ ಪ್ರಥಮ ಸ್ಥಾನ ದೊರಕಿದೆ. ಕಮಿಟಿ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದೆ. ಗ್ರಾಮದವರ ಪ್ರೀತಿ, ವಾತ್ಸಲ್ಯ ಬಹುಮಾನಕ್ಕಿಂತ ಅಮೂಲ್ಯ. ಗ್ರಾಮಸ್ಥರಿಂದ ಇನ್ನೂ ಉತ್ತಮ ಕಾರ್ಯಗಳು ನೆರವೇರಲಿ ಎಂದು ಆಶಿಸಿದರು.
ಬಹುಮಾನ ಆಯೋಜಿಸಿದ್ದ ಅಶೋಕ ಸಿಂಗಾಡಿ, ರಾಜಶೇಖರ ಯರಗಟ್ಟಿ, ಉಮೇಶ ಉಳ್ಳಾಗಡ್ಡಿ, ಮಹೇಶ ಕೊಳದೂರ, ಬಸವರಾಜ ಪಾಟೀಲ, ಡಾ.ಮಲ್ಲಿಕಾರ್ಜುನ ನೆಗಳಿ, ಪ್ರಕಾಶ ಭುಜನ್ನವರ, ಸಾಗರ ಖಾನಾಪುರರನ್ನು ಗೂಳಿ ಬಸವೇಶ್ವರ ಯುವಕ ಸಂದಿಂದ ಸನ್ಮಾನಿಸಲಾಯಿತು. ಶಂಕರ ವಣಕಿ, ಬಾಳಪ್ಪ ಅಂಗಡಿ, ಪಿಕೆಪಿಎಸ್ ಉಪಾಧ್ಯ ಬಾಳೇಶ ವಣಕಿ, ಗ್ರಾಪಂ ಅಧ್ಯ ಕರೆಪ್ಪ ಬಡಿಗವಾಡ, ಮಲ್ಲಿಕಾರ್ಜುನ ಪಾಟೀಲ, ಮಲ್ಲಿಕಾರ್ಜುನ ಸ್ವಾಮಿಗೊಳ, ನಾಗರಾಜ ಕಂಬಾರ, ಭೀಮಗೌಡ ಪಾಟೀಲ, ಚನ್ನಯ್ಯ ಮಠಪತಿ, ಸಂಜು ಹಿರಟ್ಟಿ, ಶಿವಾನಂದ ಮಮದಾಪುರ, ಮಾರುತಿ ಹಂಜಿ, ಬಾಳಯ್ಯ ಪೂಜೇರಿ, ಬಾಳಪ್ಪ ಮಾರಿಹಾಳ ಇತರರಿದ್ದರು.