ತಾಳಿಕೋಟೆ ಭಾಗದಲ್ಲಿ ಖಾಸ್ಗತರೇ ದೇವರು - ಚನ್ನಬಸವ ಸ್ವಾಮಿಗಳ ಹೇಳಿಕೆ

TLK 16-1
ತಾಳಿಕೋಟೆ ಪಟ್ಟಣದ ಖಾಸ್ಗತ ಶಿವಯೋಗಿಗಳ ಹಾಗೂ ವಿರಕ್ತ ಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮಿಗಳು ಉದ್ಘಾಟಿಸಿದರು. ರಾಜೇಂದ್ರ ಒಡೆಯರ್, ಕಾಶಿನಾಥ ಸ್ವಾಮಿಗಳು ಇತರರಿದ್ದರು.
Published on

ತಾಳಿಕೋಟೆ: ನಿರಂತರ ಪೂಜೆಯಲ್ಲಿ ನಿಷ್ಠರಾಗಿದ್ದ ಖಾಸ್ಗತ ಶಿವಯೋಗಿಗಳಿಗೆ ಭಕ್ತರ ಉದ್ಧಾರವೇ ಕಾಯಕವಾಗಿತ್ತು ಎಂದು ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮಿಗಳು ಹೇಳಿದರು.

ಖಾಸ್ಗತ ಶಿವಯೋಗಿಗಳ 126ನೇ ಹಾಗೂ ವಿರಕ್ತ ಸ್ವಾಮಿಗಳ 8ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸ್ಗರು ಹಾಗೂ ವಿರಕ್ತ ಶ್ರೀಗಳ ಮಾರ್ಗದರ್ಶನದಲ್ಲಿ ಈಗಿನ ಸಿದ್ಧಲಿಂಗ ದೇವರು ನಡೆಯುತ್ತಿದ್ದಾರೆ. ಈ ಕಾರ್ಯದಿಂದಲೇ ತಾಳಿಕೋಟೆಯು ಭಕ್ತಿಯ ಊರಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಖಾಸ್ಗತರ ಹೊರತಾಗಿ ಬೇರಾವ ದೇವರಿಲ್ಲ ಎಂದರು.

ಗುಳೇದಗುಡ್ಡದ ಗಚ್ಚಿನಮಠದ ಕಾಶಿನಾಥ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಅಧ್ಯಾತ್ಮಿಕ ವಿಚಾರದಿಂದ ದೂರ ಉಳಿಯಲಾಗುತ್ತದೆ. ಪುಣ್ಯ ಕತೆಗಳು, ಮಹಾತ್ಮರ ನೆನಪುಗಳು ಮಾಯವಾಗುತ್ತಿವೆ ಎಂದು ತಿಳಿಸಿದರು.

ನಾವದಗಿ ಬ್ರಹನ್ಮಠದ ರಾಜೇಂದ್ರ ಒಡೆಯರ್ ಮಾತನಾಡಿ, ಮಹಾತ್ಮರ ಹಾಗೂ ಶರಣರ ಪುಣ್ಯಸ್ಮರಣೆಯಿಂದ ಅವರ ಬಗ್ಗೆ ಅರಿತು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯಗುತ್ತದೆ ಎಂದರು.

ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಮಾತನಾಡಿದರು. ಉಪನ್ಯಾಸಕ ಎ.ಬಿ.ಇರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಪುರಸಭೆ ನೀರು ಸರಬರಾಜು ಮುಖ್ಯಸ್ಥ ಶಂಕರಗೌಡ ಬಿರಾದಾರ, ಆರೋಗ್ಯ ಇಲಾಖೆಯ ಎಸ್.ಎ.ಘತ್ತರಗಿ, ಉಪನ್ಯಾಸಕ ಎಸ್.ಎಸ್.ನಾಡಗೌಡ ಅವರನ್ನು ಸನ್ಮಾನಿಸಲಾಯಿತು.

ಶ್ರೀಶೈಲ ಹಿರೇಮಠ ಅವರು ರಚಿಸಿದ ಕರುಳು ಬಾ ಬೆಳಕೆ ಎಂಬ ಸಿಡಿಯನ್ನು ಉಭಯ ಶ್ರೀಗಳು ಬಿಡುಗಡೆಗೊಳಿಸಿದರು. ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುೇಶ ವಿರಕ್ತಮಠ, ಚಲನಚಿತ್ರ ನಟ ರಾಜು ತಾಳಿಕೋಟೆ ಇತರರಿದ್ದರು.

ಗವಾಯಿಗಳಾದ ಗುಂಡಣ್ಣ ಹಂದಿಗನೂರ, ದೀಪಕಸಿಂಗ್ ಹಜೇರಿ ಸಂಗಡಿಗರು ಸ್ವಾಗತಿಸಿದರು. ಆರ್.ಬಿ.ದಾನಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net