

ಇಟಗಿ: ಸಮೀಪದ ಅವರೊಳ್ಳಿ&ಬಿಳಕಿ ಗ್ರಾಮದಲ್ಲಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನವಾದ ಬುಧವಾರ ದೇವತೆಯರ ಹೊನ್ನಾಟದ ವೆಭವ ನೋಡಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದರ್ಶನ ಪಡೆದರು.
ಜಿಟಿಜಿಟಿ ಮಳೆಯ ಮಧ್ಯೆಯೂ ಭಂಡಾರದಲ್ಲಿ ಮಿಂದೆದ್ದು, ಯುವಜನತೆ ಖುಷಿಪಟ್ಟರು. ದೂರದ ಊರುಗಳಿಂದ ಸಹಸ್ರಾರು ಭಕ್ತರು ಹೊನ್ನಾಟದಲ್ಲಿ ಪಾಲ್ಗೊಂಡು ದೇವಿ ಆಶೀರ್ವಾದ ಪಡೆದರು. ಜಾತ್ರೆ ನಿಮಿತ್ತ ಗ್ರಾಮದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ವಿಠ್ಠಲ ರುಕ್ಮಾಯಿ ದೇವಸ್ಥಾನದ ಎದುರು ಜಾತ್ರಾ ಮಂಟಪದಲ್ಲಿ ದೇವತೆಯರನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ಉಡಿ ತುಂಬಲು ಮತ್ತು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ನಂತರ ಸೀಮೋಲ್ಲಂನ ನಡೆಯಿತು. ಜ್ಯೋತಿಬಾ ಭರಮಪ್ಪನವರ, ಅಶೋಕ ಕೊಡೊಳ್ಳಿ, ರಾಜುಗೌಡ ಪಾಟೀಲ, ಮಂಜುನಾಥ ಭರಮಪ್ಪನವರ, ಯಶವಂತ ಕೊಡೊಳ್ಳಿ, ರುದ್ರಪ್ಪ ಚವಲಗಿ, ವಿಠ್ಠಲ ದೇಶನೂರ, ರುದ್ರಪ್ಪ ಶಿವಪ್ಪನವರ, ಮಂಜುನಾಥ ಕೋಳೆಕರ ಹಾಗೂ ಇತರರು ಇದ್ದರು.