ಜನಮಾನಸದಲ್ಲಿ ಡಾ. ಶೆಟ್ಟಿ ಅಮರ - ಡಾ.ಕೋರೆ ಸ್ಮರಣೆ

0101
Published on

ಬೆಳಗಾವಿ: ತಾವು ಮಾಡುವ ರಚನಾತ್ಮಕ ಸೇವೆಗಳಿಂದ ದೊಡ್ಡ ವ್ಯಕ್ತಿಯಾಗಿ ಜನಮಾನಸದಲ್ಲಿ ಅಮರವಾಗುತ್ತಾರೆ ಎಂಬ ಮಾತಿದೆ. ಅದರಂತೆ ಡಾ. ಆರ್.ಎನ್. ಶೆಟ್ಟಿ ಅವರು ನಿಸ್ವಾರ್ಥ ಸೇವೆ, ವಿನೂತನ ಕಾರ್ಯಗಳಿಂದ ಯುವ ಜನಾಂಗಕ್ಕೆ ಆದರ್ಶರಾಗಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಹೇಳಿದರು.

ಬೆಂಗಳೂರಿನ ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭಾನುವಾರ ಆಯೋಜಿಸಿದ್ದ ಆರ್.ಎನ್. ಶೆಟ್ಟಿ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್.ಎನ್. ಶೆಟ್ಟಿ ಅವರು ಕಂಡ ಕನಸನ್ನು ನನಸಾಗಿಸಿಸಲು ಸದಾ ಶ್ರಮಿಸುತ್ತಿದ್ದರು. ಅದರಂತೆ ಯಶಸ್ವಿಯೂ ಆಗಿದ್ದು, ಯುವಜನಾಂಗ ಅವರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬದುಕಿನ ಸವಾಲುಗಳನ್ನು ಅತ್ಯಂತ ಸಹಜವಾಗಿ, ಪ್ರೀತಿಯಿಂದ ಎದುರಿಸಿದ ಅವರು ಸೇವೆಗೈಯದ ಕ್ಷೇತ್ರವೇ ಇಲ್ಲ. ಎಲ್ಲ ನೆಲೆಗಳಲ್ಲಿ ಶ್ರಮಿಸಿ ಹೊಸದನ್ನು ನಿರ್ಮಿಸಿದರು. ಉತ್ತರದಿಂದ ದಕ್ಷಿಣದವರೆಗೆ ಆರ್.ಎನ್. ಶೆಟ್ಟಿ ಎಂಬ ವಿನೂತನ ಬ್ರಾಂಡ್ ನಿರ್ಮಿಸಿದ್ದರು. ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ನಿರ್ಮಾಣದಲ್ಲಿಯೂ ಮಹತ್ವದ ಯೋಗದಾನ ನೀಡಿದ್ದನ್ನು ನಾನೆಂದೂ ಮರೆಯುವುದಿಲ್ಲ ಎಂದು ಅವರ ಕೊಡುಗೆ ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net