

ಗೋಕಾಕ: ನಗರದ ದಿ.ಗೋಕಾಕ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 57ನೇ ವಾರ್ಷಿಕ ಸಭೆ ಬ್ಯಾಂಕ್ ಸಭಾಭವನದಲ್ಲಿ ಗುರುವಾರ ಜರುಗಿತು.
ಬ್ಯಾಂಕಿನ ಅಧ್ಯಕ್ಷ ಅಪ್ಪಯ್ಯ ಬಡನಿಂಗೋಳ ಮಾತನಾಡಿ, ಬ್ಯಾಂಕ್ 20.60 ರೂ. ಕೋಟಿ ರೂ. ವ್ಯವಹಾರ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 571.08 ಲಕ್ಷ ರೂ. ಸಾಲ ಹಂಚಿಕೆ ಮಾಡಿದೆ. 2023-24ನೇ ಸಾಲಿನಲ್ಲಿ ಶೇ.95.41 ಸಾಲ ವಸೂಲಿ ಆಗಿದೆ. ಸಾಲ ವಸೂಲಾತಿಯಲ್ಲಿ ಬ್ಯಾಂಕ್ ಜಿಲ್ಲೆಗೆ ಎರಡನೆಯ ಸ್ಥಾನ ಪಡೆದಿದೆ. 36.90 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.
ಸರ್ಕಾರದಿಂದ ಶೇ. 3ರ ಬಡ್ಡಿದರದಲ್ಲಿ ನೀಡುವ ಸಾಲ ಸಕಾಲಕ್ಕೆ ಮರುಪಾವತಿಸಿದರೆ ಭೂ ಅಭಿವೃದ್ಧಿ ಯೋಜನೆ, ಟ್ರ್ಯಾಕ್ಟರ್ ಯೋಜನೆ, ಕುರಿಸಾಕಣೆ ಹಾಗೂ ಎತ್ತು ಚಕ್ಕಡಿ ಯೋಜನೆ ಲಾಭ ಪಡೆಯಬಹುದು ಎಂದರು.
ಉಪಾಧ್ಯಕ್ಷ ರಾಜು ಬೈರುಗೋಳ, ನಿರ್ದೇಶಕರಾದ ಶಿವಮೂರ್ತಿ ಹುಕ್ಕೇರಿ, ಬಸವಂತಪ್ಪ ಹೊಸೂರ, ಅಶೋಕ ಉದ್ದಪ್ಪನವರ, ಹನಮಂತ ಅಮ್ಮಿನಬಾವಿ, ಸಿದ್ದಪ್ಪ ಹಂಜಿ, ಲಗಮಪ್ಪ ಬೀರನಗಡ್ಡಿ, ಬಸವರಾಜ ಬಡಗನ್ನವರ, ಪ್ರಕಾಶ ತೋಳಿನವರ, ಶಂಕರ ಭೂಸನ್ನವರ, ಧರೆಪ್ಪ ಮುಧೋಳ, ಕೀರಪ್ಪ ಪೂಜೇರಿ, ಶಕುಂತಲಾ ವಂಟಗೂಡಿ, ಲಕ್ಷ್ಮೀ ದಳವಾಯಿ, ವ್ಯವಸ್ಥಾಪಕ ಸಂದೀಪ ಪತ್ರಾವಳಿ, ಶಿವಕುಮಾರ ಮರಲಿಂಗಣ್ಣವರ ಇತರರಿದ್ದರು.