

ಚಾಮರಾಜನಗರ: ತರಕಾರಿ ಹೆಸರಿನಲ್ಲಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಲಕ್ಷಾಂತರ ರೂ. ಮೌಲ್ಯದ ಸಿಗರೆಟ್ ಸಾಗಿಸುತ್ತಿದ್ದ ಚಾಲಾಕಿಗಳು ಸಿಕ್ಕಿಬಿದ್ದಿದ್ದಾರೆ.
ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಕಂಟೇನರ್ ನ ಹಿಂಭಾಗ ಕೋಸು ತುಂಬಿಸಿ ಮುಂದೆ ಸಿಗರೇಟ್ ಬಾಕ್ಸ್ ಇಟ್ಟು ಸಾಗಿಸುತ್ತಿದ್ದ ತಮಿಳುನಾಡಿನ ಭರತ್, ಗಣೇಶ್ ಅನ್ನು ವಾಹನ ಸಮೇತ ವಶಕ್ಕೆ ಪಡೆಯಲಾಗಿದೆ.
ಅಗತ್ಯ ವಸ್ತುಗಳ ಸರಬರಾಜಿಗೆ ನೀಡಿರುವ ಅವಕಾಶವನ್ನು ಬಳಸಿಕೊಂಡು ಗುರುವಾರ ಬೆಳಗ್ಗಿನ ಜಾವ ಸಿಗರೇಟರ್ ತುಂಬಿದ್ದ ವಾಹನವನ್ನು ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ಬೇಡಗುಳಿ ವಿಎ ಸುರೇಶ್, ಕಾಗಲವಾಡಿ ವಿಎ ಕೆ.ಜೆ.ಸುಧೀರ್, ಆರೋಗ್ಯ ಇಲಾಖೆಯ ನವೀನ್ ಮತ್ತು ಪೊಲೀಸರು ತಪಾಸಣೆ ನಡೆಸಿ ತರಕಾರಿ ಜತೆ ಸಿಗರೇಟ್ ಬಾಕ್ಸ್ ಕೊಂಡೊಯ್ಯುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.