

ಬೆಳಗಾವಿ: ನಗರ ಸೇರಿ ಜಿಲ್ಲಾದ್ಯಂತ ಸೋಮವಾರ ಎಲ್ಲ ಮಸೀದಿಗಳಲ್ಲಿ ಮುಸ್ಲಿಮರು ದೈಹಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ(ನಮಾಜ್) ಮಾಡಿದರು. ಕೋವಿಡ್-19ನಿಂದಾಗಿ ಘೋಷಿಸಿದ್ದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳಿಂದ ಮಸೀದಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು.
ರಂಜಾನ್ ಮಾಸದಲ್ಲೂ ಮುಸ್ಲಿಮರು ಮನೆಯಲ್ಲೇ ನಮಾಜ್ ಮಾಡಿ ಅಲ್ಲಾಹ್‌ನ ಕೃಪೆಗೆ ಪಾತ್ರರಾಗಿದ್ದರು. ಆದರೆ, ಲಾಕ್‌ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಐದು ಹೊತ್ತು ಮಸೀದಿಗಳಲ್ಲಿ ನಮಾಜ್ ಮಾಡಿದರು. ಸಕಲ ಜೀವರಾಶಿ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.