

ಮಹಾಲಿಂಗಪುರ:ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ಸಂಶೋಧನಾ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯ ಎಂದು ಗೋದಾವರಿ ಬಯೋರಿಫೈನರೀಸ್ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ ಹೇಳಿದರು.ಸ್ಥಳಿಯ ಕೆಎಲ್ಇ ಡಿಪ್ಲೊಮಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್ ಇಂಟಲಿಜೆನ್ಸಿ) ವಿಷಯ ಇಂದು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತೀ ಅವಶ್ಯ ಎಂದರು.ನಿರಾಣಿ ಶುಗರ್ಸ್ ಡಿಜಿಎಂ ದಯಾನಂದ ನಾಡಗೌಡ ಮಾತನಾಡಿ, ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ಅವರ ವಿಶೇಷ ಗುಣಗಳಾದ ಕಠಿಣ ಪರಿಶ್ರಮ, ಕಾಯಕ ನಿಷ್ಠೆ, ಪ್ರಾಮಾಣಿಕತೆ, ಶಿಸ್ತು ಮತ್ತು ಸರಳತೆ ಮೈಗೂಡಿಸಿಕೊಂಡಾಗ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಪ್ರಾಚಾರ್ಯ ಎಸ್.ಐ ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು. ಸಾಂಸತಿಕ ವಿಭಾಗದ ಮುಖ್ಯಸ್ಥೆ ವಂದನಾ ಪಸಾರ, ಉಪನ್ಯಾಸಕರಾದ ಸುಭಾಷ ಮೂಷಿ, ಉಮೇಶ ಹಾದಿಮನಿ, ಮಂಜುನಾಥ ಅರಕೇರಿ, ಸವಿತಾ ಬೀಳಗಿ, ಮಿನಾಜ ಅತ್ತಾರ, ಪ್ರಿಯಾ ಸೋನಾರ, ಅಮಿತ ಜಾಧವ, ವಿಶಾಲ ಮೆಟಗುಡ್ಡ, ಪ್ರಕಾಶ ಬಡಿಗೇರ ಉಪಸ್ಥಿತರಿದ್ದರು. ಲಕ್ಷಿ$್ಮ ನಾಯಕ ನಿರೂಪಿಸಿದರು. ಮಹಾದೇವಿ ಅಂಬಿ ಸ್ವಾಗತಿಸಿದರು, ಪ್ರವಿಣ ಅವರಾದಿ ಪರಿಚಯಿಸಿದರು. ಲಕ್ಷಿ$್ಮ ಅಂಗಡಿ ವಂದಿಸಿದರು.
ಮಹಾಲಿಂಗಪುರದ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದಿನೇಶ ಶರ್ಮಾ, ಎಸ್.ಐ.ಕುಂದಗೋಳ, ದಯಾನಂದ ನಾಡಗೌಡ ಇದ್ದರು.