ಮಸ್ಕಿಯಲ್ಲಿ ಮುಸುಕುಧಾರಿಗಳ ತಿರುಗಾಟ

Maski Wandaring
ಮಸ್ಕಿ ಪಟ್ಟಣದ ಪರಾಪುರ ರಸ್ತೆಯಲ್ಲಿ ಮುಸುಕುಧಾರಿಗಳು ಓಡಾಡಿದ ಸಿಸಿ ಕ್ಯಾಮರಾ ದೃಶ್ಯಗಳು.
Published on

ಮಸ್ಕಿ: ಪಟ್ಟಣದ ಪರಾಪುರ ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ ಏಳು ಜನ ಮುಸುಕುಧಾರಿಗಳು ಕೈಯಲ್ಲಿ ಬಡಿಗೆ ಹಿಡಿದು ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ಇತ್ತಿಚೀಗೆ ಪಟ್ಟಣದ ವಿವಿಧೆಡೆ ಬೈಕ್ ಕಳ್ಳತನ ಪ್ರಕರಣಗಳು ನಡೆದಿದ್ದವು. ಇದೀಗ ಮುಸುಕುಧಾರಿಗಳಲ್ಲಿ ನಾಲ್ಕು ಜನರ ಒಂದು ಗುಂಪು ಮತ್ತು ಮೂರು ಜನರ ಇನ್ನೊಂದು ಗುಂಪು ಪರಾಪುರ ರಸ್ತೆಯ ಬಸನಗೌಡ ಪೊಲೀಸ್ ಪಾಟೀಲ್ ಮನೆ ಮುಂದೆ ಓಡಾಡಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಷಯ ತಿಳಿದು ಪೊಲೀಸರು ರಾತ್ರಿಯಿಂದಲೇ ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದಾರೆ. ಮುಸುಕುಧಾರಿಗಳ ಪತ್ತೆ ಕಾರ್ಯ ತೀವ್ರಗೊಳಿಸಿದ್ದಾರೆ. ಅಪರಿಚಿತರು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಿಪಿಐ ಬಾಲಚಂದ್ರ ಡಿ.ಲಕ್ಕಂ ಮತ್ತು ಪಿಎಸ್‌ಐ ಮುದ್ದುರಂಗಯ್ಯ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net