ಮ್ಯಾರಥಾನ್‌ನಲ್ಲಿ ಅನಿಕೇತಗೆ ಪ್ರಥಮ ಬಹುಮಾನ

24npn2
Published on

ನಿಪ್ಪಾಣಿ: ಮಹಾಶಿವರಾತ್ರಿ ಅಂಗವಾಗಿ ಸ್ಥಳೀಯ ಮಹಾದೇವ ಗಲ್ಲಿಯ ಮಹಾದೇವ ಮಂದಿರದ ವತಿಯಿಂದ ಸೋಮವಾರ ಆಯೋಜಿಸಿದ್ದ 21 ಕಿ.ಮೀ. ಮ್ಯಾರಥಾನ್‌ನಲ್ಲಿ ಮಹಾರಾಷ್ಟ್ರದ ಸಾಂಗಲಿಯ ಅನಿಕೇತ ಶಿಂಗಾರೆ 1 ಗಂಟೆ 5 ನಿಮಿಷದಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ 21 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ಪಡೆದರು.

ಅನುಕ್ರಮವಾಗಿ ರಾಧಾನಗರಿಯ ಪ್ರಧಾನ ಕಿರೋಳರ, ಸಾಂಗಲಿಯ ಪ್ರವೀಣ ಕಾಂಬಳೆ, ಸಾಂಗಲಿಯ ಚೈತನ್ಯ ರೂಪನಾರ, ಸುಮಂತ ರಾಜಬರ್ ಅವರು ದ್ವಿತೀಯ, ತತೀಯ, ನಾಲ್ಕನೇ, ಐದನೇ ಸ್ಥಾನದೊಂದಿಗೆ 15 ಸಾವಿರ ರೂ., 9 ಸಾವಿರ ರೂ., 7 ಸಾವಿರ ರೂ., 5 ಸಾವಿರ ರೂ. ನಗದು ಬಹುಮಾನ ಪಡೆದರು.

ಅಮರ ಗುರವ ಹಾಗೂ ನಾರಾಯಣ ಪಾಟೀಲ ವಿಶೇಷ ಬಹುಮಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅಮರ ಕೋಣೆ, ಕೆಎಲ್‌ಇ ಸಂಸ್ಥೆಯ ಸಂಚಾಲಕ ಅಮರ ಬಾಗೇವಾಡಿ, ವಿಎಸ್‌ಎಂ ಸಂಚಾಲಕ ಸಂಜಯ ಮೊಳವಾಡೆ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಚಂದ್ರಕಾಂತ ಪಾಟೀಲ, ರಾಕೇಶ ಪಾಟೀಲ, ರಾವಸಾಹೇಬ ಚಂದ್ರಕುಡೆ, ಮಹೇಶ ದಿವಾಣ, ಡಾ. ಮಹೇಶ ಐನಾಪುರೆ, ರಾಕೇಶ ಪಾಟೀಲ, ಸದಾಶಿವ ಚಂದ್ರಕುಡೆ, ಅರುಣ ಭೋಸಲೆ, ಮಹಾದೇವ ಪಾಟೀಲ, ರೋಹಿತ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net