

ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸದಂತೆ ಮಹಿಳೆಯರಿಗೆ ಎಲ್ಲ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ. ಎಸಿ, ನಾನ್ ಎಸಿ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಕಲ್ಪಿಸಬೇಕಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಯೋಜನೆ ಜಾರಿಗೊಳಿಸಬೇಕು. ಅಂತರಾಜ್ಯಕ್ಕೆ ಸಂಪರ್ಕಿಸುವ ಬಸ್‌ಗಳು ಸೇರಿ ಉಚಿತವಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸದಿರುವುದು ಸ್ತ್ರೀಯರಿಗೆ ತೋರಿದ ಅಗೌರವವಾಗಿದೆ.
ಇದೊಂದು ರಾಜ್ಯ ಸರ್ಕಾರದ ನಿಶ್ಯಕ್ತಿ ಯೋಜನೆಯಾಗಿದೆ ಎಂದು ಲೇವಡಿ ಮಾಡಿದರು. ಸರ್ಕಾರ ಯೋಜನೆಯನ್ನು ಮರು ಪರಿಶೀಲಿಸಬೇಕು. ಹಬೊಹಳ್ಳಿ ಬಸ್ ಡಿಪೋಗೆ 25 ಹೊಸ ಬಸ್‌ಗಳನ್ನು ನೀಡುವಂತೆ ಒತ್ತಾಯಿಸುವೆ ಎಂದರು.
ಪುರಸಭೆ ಸದಸ್ಯರಾದ ಬಿ.ಗಂಗಾಧರ, ಭೋವಿ ವೀರಣ್ಣ, ನಾಗರಾಜ ಜನ್ನು, ದೀಪಕ್ ಕಠಾರೆ, ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಭರಮರೆಡ್ಡಿ, ಬಾದಾಮಿ ಮೃತ್ಯುಂಜಯ, ಚಿತವಾಡ್ಗಿ ಪ್ರಕಾಶ್, ಸಂಚಿ ಶಿವಕುಮಾರ್, ಕಿನ್ನಾಳ್ ಸುಭಾಷ್, ಬಿ.ಜಿ.ಬಡಿಗೇರ, ಕೊಟ್ರೇಶ್ ಹಂಪಾಪಟ್ಟಣ, ಉಪತಹಸೀಲ್ದಾರ್ ವಿಶ್ವೇಶ್ವರರಯ್ಯ, ತಾಪಂ ವ್ಯವಸ್ಥಾಪಕ ಮಾಲತೇಶ್, ಸಿಪಿಐ ಟಿ.ಮಂಜಣ್ಣ, ಪಿಎಸ್‌ಐ ಸರಳಾ, ಡಿಪೋ ವ್ಯವಸ್ಥಾಪಕಿ ಗುರುಬಸಮ್ಮ, ಸಿಬ್ಬಂದಿ ಲಿಂಗರಾಜು, ಸೇವಾನಾಯ್ಕ, ಮಂಜುನಾಥ, ಎಲ್.ಎನ್.ಪಾಂಡುನಾಯ್ಕ, ಡಿ.ರವಿಕುಮಾರ, ರಿಯಾಜ್ ಇದ್ದರು.