ಮಲಪ್ರಭಾ ನದಿಯಲ್ಲಿ ಮಿಂದೆದ್ದ ಭಕ್ತರು

14mkh1(A).
Published on

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿತೀರದಲ್ಲಿ ಮಕರ ಸಂಕ್ರಮಣ ದಿನದ ನಿಮಿತ್ತ ಮಂಗಳವಾರ ಸಾಗರೋಪಾದಿಯಲ್ಲಿ ಭಕ್ತರು ಎಳ್ಳು&ಅರಿಶಿನ ಹಚ್ಚಿಕೊಂಡು ಪವಿತ್ರ ಸ್ನಾನ ಮಾಡಿದರು.

ಸ್ನಾನದ ನಂತರ ಭಕ್ತರು ಮಲಪ್ರಭಾ ನದಿ ಮಧ್ಯದ ಶರಣೆ ಗಂಗಾಂಬಿಕಾ ಐಕ್ಯಮಂಟಪ, ವಿಠ್ಠಲ&ರುಕ್ಮೀಣಿ ಮಂದಿರ ಹಾಗೂ ಅಶ್ವತ್ಥ&ಲಕ್ಷಿ$್ಮ ನರಸಿಂಹ ದೇವಸ್ಥಾನಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು. ಗಂಗಾಮಾತೆಗೆ ಪೂಜೆ ಸಲ್ಲಿಸಿ, ನೆವೇದ್ಯ ಅರ್ಪಿಸಿದರು. ಕುಟುಂಬ ಸಮೇತರಾಗಿ ಕುಳಿತುಕೊಂಡು ಮನೆಯಿಂದ ತಂದಿದ್ದ ಮಾದಲಿ, ಕರ್ಚಿಕಾಯಿ, ಸಜ್ಜಿರೊಟ್ಟಿ, ಮೊಸರನ್ನ ಸೇರಿ ತರಹೇವಾರಿ ಆಹಾರ ಖಾದ್ಯ ಸವಿದರು. ಜಾತ್ರೆಯಲ್ಲಿ ಸುತ್ತಾಡಿ ಇಷ್ಟದ ವಸ್ತುಗಳನ್ನು ಖರೀದಿಸಿದರು. ಜೋಕಾಲಿ ಆಡಿ ಸಂಭ್ರಮಿಸಿದರು. ಮಕರ ಸಂಕ್ರಮಣದ ಪ್ರಯುಕ್ತ ಶ್ರೀೇತ್ರ ಜನಸಾಗರದಿಂದ ತುಂಬಿತ್ತು. ಪೊಲೀಸರು ಸಂಚಾರ ಹಾಗೂ ದಟ್ಟಣೆ ನಿಯಂತ್ರಿಸಿ, ಶಾಂತಿಸುವ್ಯವಸ್ಥೆ ಕಾಪಾಡಲು ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net