ಚಿನ್ನದನಾಡಲ್ಲಿ ಮರ್ಯಾದಾ ಪುರುಷೋತ್ತಮನ ಜಪ

raichur rama
ರಾಯಚೂರು ನಗರದ ರಾಮ ಮಂದಿರದಲ್ಲಿ ಭಾನುವಾರ ಶ್ರೀರಾಮನವಮಿ ನಿಮಿತ್ತ ಶ್ರೀರಾಮಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ಶ್ರೀರಾಮ, ಹನುಮ ದೇವಸ್ಥಾನಗಳಲ್ಲಿ ಭಾನುವಾರ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ನಗರದ ರೈಲ್ವೆ ನಿಲ್ದಾಣ ಹತ್ತಿರದ ರಾಮಮಂದಿರ, ಕೋದಂಡ ರಾಮ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಪುಷ್ಪಾಲಂಕಾರ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ನಂತರ ಶ್ರೀರಾಮನ ಕಲ್ಯಾಣೋತ್ಸವ ನೆರವೇರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಅಲಂಕೃತ ರಾಮನ ದರ್ಶನ ಪಡೆದು ಪುನೀತರಾದರು. ರಾಮ, ಸೀತೆ, ಲಕ್ಷ್ಮ್ಮಣ ಹಾಗೂ ಹನುಮಂತ ಭಾವಚಿತ್ರಗಳನ್ನೂ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನವಮಿ ನಿಮಿತ್ತ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

ಕಾಡ್ಲೂರಲ್ಲಿ ಶ್ರೀರಾಮೋತ್ಸವ ಆಚರಣೆ: ಕಾಡ್ಲೂರು ಗ್ರಾಮ ಕೃಷ್ಣಾ ನದಿ ತೀರದ ವನವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಭಾನುವಾರ ಶ್ರೀರಾಮ ನವಮಿ ಆಚರಿಸಲಾಯಿತು.

ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಯೋಧ್ಯೆ ಶ್ರೀರಾಮದೇವರ ಧ್ವಜಾರೋಹಣ, ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮ, ಪ್ರಾಣದೇವರಿಗೆ ಅಭಿಷೇಕ, ಅಲಂಕಾರ, ರಾಮದೇವರ ತೊಟ್ಟಿಲು ಮಹೋತ್ಸವ ಆಚರಣೆ ಮಾಡಲಾಯಿತು.

ನಂತರ ದಾಮೋದರ್ ಆಚಾರ್ ಪುರೋಹಿತ ಅವರಿಂದ ಶ್ರೀರಾಮದೇವರ ಪ್ರವಚನ, ನೈವೇದ್ಯ, ಮಹಾ ಮಂಗಳಾರತಿ, ಪಾನಕ, ಹಣ್ಣು ವಿತರಿಸಲಾಯಿತು. ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯಕುಮಾರ ದೇಸಾಯಿ, ವಾಸುದೇವಾಚಾರ್ ಕಲ್ಯಾಣಿ, ಶ್ರೀನಿವಾಸ ಆಚಾರ್ಯ ಜೋಷಿ, ಪ್ರಹ್ಲಾದ್ ಆಚಾರ್, ಕೊಪ್ರೇಶ ಕುಲಕರ್ಣಿ, ಗುರುರಾಜ ಆಚಾರ ಜೋಷಿ ಸೈದಾಪುರ, ಸುಬ್ಬಾರಾವ್ , ವಿಜಯಕುಮಾರ ದೇಸಾಯಿ, ಸುವರ್ಣ ಬಾಯಿ ದೇಸಾಯಿ, ಅಶ್ವಿನಿ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net