ಎತ್ತುಗಳ ಮೈ ತೊಳೆಯಲು ಹೋದ ರೈತ ನೀರಿನಲ್ಲಿ ಮುಳಗಿ ಸಾವು

Crime Logo
Published on

ಸವಣೂರ: ಎತ್ತುಗಳ ಮೈ ತೊಳೆಯಲು ಹೋದ ರೈತನೊಬ್ಬ ಕೆರೆಯಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಕಡಕೋಳ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಷಣ್ಮುಖಪ್ಪ ಫಕ್ಕೀರಪ್ಪ ಬಾರ್ಕಿ (35) ಮೃತ ರೈತ.
ಇವರು ಜಮೀನಿನಲ್ಲಿ ಗಳೆ ಹೊಡೆದ ಬಳಿಕ ಎತ್ತುಗಳ ಮೈ ತೊಳೆಯಲು ಕೆರೆಗೆ ಹೋಗಿದ್ದರು. ಈ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net