ಕೆರೆಯಲ್ಲಿ ಮುಳುಗಿ ಮೂವರು ಸಾವು

Water death
Published on

ಸೊರಬ: ಮೀನು ಹಿಡಿಯಲು ಹೋಗಿ ಅಪ್ಪ, ಮಗ ಹಾಗೂ ಪಕ್ಕದ ಮನೆಯ ವ್ಯಕ್ತಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ತಾಲೂಕಿನ ತ್ಯಾವರೆತೆಪ್ಪ ಗ್ರಾಮದಲ್ಲಿ ಸಂಭವಿಸಿದೆ.

ತಾಲೂಕಿನ ಆನವಟ್ಟಿ ಹೋಬಳಿಯ ತ್ಯಾವರೆತೆಪ್ಪ ಗ್ರಾಮದ ಬಸವರಾಜಪ್ಪ (45), ಅವರ ಮಗ ಆಕಾಶ್ (14), ಹಾಗೂ ಪಕ್ಕದ ಮನೆಯ ಶಿವಮೂರ್ತಿ (49) ಮತಪಟ್ಟ ದುರ್ದೈವಿಗಳು. ಸೊರಬ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶವಗಳನ್ನು ಹೊರತೆಗೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net