

ಸಂಡೂರು: ನಿರಂತರ ಮಳೆಯಿಂದ ತಾಲೂಕಿನ ಕಾಳಿಂಗೇರಿ ಗ್ರಾಪಂ ವ್ಯಾಪ್ತಿ ಅಂಕಮನಾಳ್ ಗ್ರಾಮದ ಕೆರೆಯಲ್ಲಿ ಸಣ್ಣ ರಂಧ್ರ ಕಾಣಿಸಿಕೊಂಡಿದೆ.
ಧಾರಾಕಾರ ಮಳೆಯಿಂದ ಕೆರೆ ತುಂಬಿದ್ದಲ್ಲದೆ ಸಣ್ಣ ರಂಧ್ರ ಬಿದ್ದಿದೆ. ಈ ಕುರಿತು ಕಾಳಿಂಗೇರಿ ಗ್ರಾಪಂ ಅಧ್ಯಕ್ಷ ಕಾರ್ತಿಕ್ ಅವರು ತಕ್ಷಣ, ಸಣ್ಣ ನೀರಾವರಿ ಇಲಾಖೆ ಎಇ ಗಮನಕ್ಕೆ ತಂದಿದ್ದಾರೆ. ಕಾರ್ಮಿಕರಿಂದ ಮುಚ್ಚುವ ಕಾರ್ಯ ನಡೆದಿದೆ.
ಈ ಕುರಿತು ಸಣ್ಣ ನೀರಾವರಿ ಇಲಾಖೆ ಎಇ ಎಂ.ರಾಜು ಪ್ರತಿಕ್ರಿಯಿಸಿ, ಕೆರೆಗೆ ಒಟ್ಟು ಮೂರು ಕಡೆ ರಂಧ್ರ ಕಾಣಿಸಿಕೊಂಡಿವೆ. ಅದರಲ್ಲಿ ಎರಡು ಬಸಿನೀರು ಹರಿಯುವ ಕಡೆಯಿವೆ. ಆದರೆ ಒಂದು ರಂಧ್ರ ಮಾತ್ರ ದೊಡ್ಡಾಗಿದ್ದು, ಮುಚ್ಚಲಾಗುತ್ತಿದೆ ಎಂದು ತಿಳಿಸಿದರು.